ರಾಜ್ಯದಲ್ಲಿನ್ನು 4,376 ಸರ್ಕಾರಿ ಕೆಜಿ ಶಾಲೆಗಳು!

ಶುಕ್ರವಾರ, ಮೇ 24, 2019
33 °C
ಅಂಗನವಾಡಿಗಳು 4,100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರ

ರಾಜ್ಯದಲ್ಲಿನ್ನು 4,376 ಸರ್ಕಾರಿ ಕೆಜಿ ಶಾಲೆಗಳು!

Published:
Updated:

ಬೆಂಗಳೂರು: ರಾಜ್ಯದ 276 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಆರಂಭಿಸಲು ಮುಂದಾಗಿರುವ ಶಿಕ್ಷಣ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದ್ದ ಅಂಗನವಾಡಿಗಳನ್ನು 4,100 ಸರ್ಕಾರಿ ಪ್ರಾಥಮಿಕ ಶಾಲೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.

ಇದರಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುವ ಕಿಂಡರ್‌ಕಾರ್ಟನ್‌ಗಳ ಸಂಖ್ಯೆ 4,376ಕ್ಕೆ ಹೆಚ್ಚಲಿದೆ.

2019–20ನೇ ಸಾಲಿನಿಂದಲೇ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರಿಸಿ ‘ಬಾಲ ಸ್ನೇಹಿ’ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು.

‘ಅಂಗನವಾಡಿ ಕೇಂದ್ರಗಳನ್ನು ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣಕ್ಕೆ ಸ್ಥಳಾಂತರಿಸಿ ಹಂತ ಹಂತವಾಗಿ ಎಲ್‌ಕೆಜಿ/ ಯುಕೆಜಿ ತರಗತಿಗಳನ್ನು ಆರಂಭಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.

ಇದು ಪೋಷಕರ ಬಹುದಿನಗಳ ಬೇಡಿಕೆಯಾಗಿತ್ತು. ಅವರು ಈಗಾಗಲೇ ‘ಮಕ್ಕಳ ಮನೆ’ಎಂಬ ಹೆಸರಲ್ಲಿ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದರು.‌ ಯಾವ ಶಾಲೆಯಲ್ಲಿ ಪ್ರಾಥಮಿಕ ಪೂರ್ವ ತರಗತಿಗಳನ್ನು ಆರಂಭಿಸಲಾಗಿತ್ತೋ, ಅಲ್ಲಿ 1ನೇ ತರಗತಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳ ಪ್ರವೇಶಾತಿ ನಡೆದಿರುವುದು ಗೊತ್ತಾಗಿತ್ತು.

**

ಶಾಲಾ ಪ್ರವೇಶಾತಿಗೆ ಕನಿಷ್ಠ ವಯಸ್ಸು 3.5 ವರ್ಷ

ತರಗತಿ ಅವಧಿ ಬೆಳಿಗ್ಗೆ 10ರಿಂದ ಸಂಜೆ 3.30

ಅತಿಥಿ ಶಿಕ್ಷಕರಿಗೆ ಗೌರವಧನ ಮಾಸಿಕ ₹ 7,500

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !