ನಾಲೆಗೆ ಕಾರು: ಐವರು ಸಾವು

7
ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಘಟನೆ

ನಾಲೆಗೆ ಕಾರು: ಐವರು ಸಾವು

Published:
Updated:

ಬೆಳಗಾವಿ: ಸವದತ್ತಿ ತಾಲ್ಲೂಕು ಶಿವಾಪುರ ಬಳಿಯ ಗೋಕಾಕ- ಯರಗಟ್ಟಿ ಹೆದ್ದಾರಿ ಬದಿಯಲ್ಲಿರುವ ಘಟಪ್ರಭಾ ಎಡದಂಡೆ ನಾಲೆಗೆ ಸೋಮವಾರ ತಡ ರಾತ್ರಿ ಕಾರು ಬಿದ್ದು, ಅದರಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಗೋಕಾಕ ಪಟ್ಟಣದ ಪಾರವ್ವ ಪೂಜೇರಿ (45), ಲಗಮಣ್ಣ ಪೂಜೇರಿ (38), ಪಕ್ಕೀರವ್ವ ಪೂಜೇರಿ (29), ಹನುಮಂತ ಪೂಜೇರಿ (60) ಹಾಗೂ ಲಕ್ಷ್ಮಿ ಪೂಜೇರಿ (40) ಮೃತರು. ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾರೆ. ಇವರೆಲ್ಲರೂ ಕಡಬಿ ಗ್ರಾಮದಲ್ಲಿ ನಿಧನರಾಗಿದ್ದ ಅವರ ಸಂಬಂಧಿ ಲಕ್ಷ್ಮಣ ಮಲ್ಲಪ್ಪ ಕುಂಟಿರಪ್ಪಗೋಳ ಅವರ ಅಂತಿಮ ದರ್ಶನ ಪಡೆಯಲು ತೆರಳುವಾಗ ಘಟನೆ ನಡೆದಿದೆ.

‘ರಾಜ್ಯ ವಿಪತ್ತು ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಕ್ರೇನ್‌ ಬಳಸಿ ಕಾರನ್ನು ಹೊರ ತೆಗೆದರು. ಹನುಮಂತ ಅವರ ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್‌ನಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !