ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ ಸಂಪುಟ ವಿಸ್ತರಣೆ: ಪಾಟೀಲ, ಸತೀಶ ಸೇರಿ 8 ಸಚಿವರ ಪ್ರಮಾಣವಚನ ಸ್ವೀಕಾರ

Last Updated 22 ಡಿಸೆಂಬರ್ 2018, 12:59 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ ಮಾಡಿದ್ದು, ನೂತನ ಸಚಿವರಾಗಿ ಎಂ.ಬಿ.ಪಾಟೀಲ, ಆರ್‌.ಬಿ.ತಿಮ್ಮಾಪುರ ಸೇರಿದಂತೆ ಎಂಟು ಶಾಸಕರು ಸಚಿವರಾಗಿ ಶನಿವಾರ ರಾಜಭನವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

* ಸಂಪುಟ ದರ್ಜೆ ಸಚಿವರಾಗಿ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್‌ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

* ಸಂಪುಟ ದರ್ಜೆ ಸಚಿವರಾಗಿ ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

* ಸಂಪುಟ ದರ್ಜೆ ಸಚಿವರಾಗಿ ಸತೀಶ ಜಾರಕಿಹೊಳಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

* ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್‌. ಶಿವಳ್ಳಿ ಈಶ್ವರನ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

* ಹೂವಿನಹಡಗಲಿ ಕ್ಷೇತ್ರದ ಶಾಸಕ ಪರಮೇಶ್ವರ ನಾಯ್ಕ್‌ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

* ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕ ಇ.ತುಕಾರಾಂ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

* ಸಂಪುಟ ದರ್ಜೆ ಸಚಿವರಾಗಿ ಬೀದರ್ ವಿಧಾನಸಭಾ ಕ್ಷೇತ್ರದ ಶಾಸಕ ರಹೀಂ ಖಾನ್ ಪ್ರಮಾಣವಚನ ಸ್ವೀಕರಿಸಿದರು.

* ಸಂಪುಟ ದರ್ಜೆ ಸಚಿವರಾಗಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಇದ್ದರು.

ಎಂ.ಬಿ.ಪಾಟೀಲ, ಎಂಟಿಬಿ ನಾಗರಾಜ್‌, ಇ.ತುಕಾರಾಂ, ಸತೀಶ ಜಾರಕಿಹೊಳಿ(ಮೇಲಿನ ಸಾಲು). ಸಿ.ಎಸ್‌. ಶಿವಳ್ಳಿ, ಪಿ.ಟಿ.ಪರಮೇಶ್ವರ ನಾಯ್ಕ, ರಹೀಂ ಖಾನ್‌, ಆರ್.ಬಿ.ತಿಮ್ಮಾಪುರ.
ಎಂ.ಬಿ.ಪಾಟೀಲ, ಎಂಟಿಬಿ ನಾಗರಾಜ್‌, ಇ.ತುಕಾರಾಂ, ಸತೀಶ ಜಾರಕಿಹೊಳಿ(ಮೇಲಿನ ಸಾಲು). ಸಿ.ಎಸ್‌. ಶಿವಳ್ಳಿ, ಪಿ.ಟಿ.ಪರಮೇಶ್ವರ ನಾಯ್ಕ, ರಹೀಂ ಖಾನ್‌, ಆರ್.ಬಿ.ತಿಮ್ಮಾಪುರ.

* ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT