ಬೆಣ್ಣೆಹಳ್ಳಕ್ಕೆ ಬ್ಯಾರೇಜ್‌ ಆಯೋಗಕ್ಕೆ ಮನವಿ

7

ಬೆಣ್ಣೆಹಳ್ಳಕ್ಕೆ ಬ್ಯಾರೇಜ್‌ ಆಯೋಗಕ್ಕೆ ಮನವಿ

Published:
Updated:
Prajavani

ಬೆಂಗಳೂರು: ‘ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಹೊಸೂರು ಗ್ರಾಮದಿಂದ ಹರಿಯುವ ಬೆಣ್ಣೆಹಳ್ಳಕ್ಕೆ ಬ್ಯಾರೇಜ್‌ ನಿರ್ಮಾಣ ಮಾಡಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ‘ರೈತ ಸೇನಾ ಕರ್ನಾಟಕ’ ಒತ್ತಾಯಿಸಿದೆ.

ಈ ಕುರಿತಂತೆ ‘ಕರ್ನಾಟಕ ಗಡಿ ರಕ್ಷಣಾ ಹಾಗೂ ನದಿಗಳ ಆಯೋಗ’ದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್ ಅವರನ್ನು ಭೇಟಿ ಮಾಡಿದ ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ್‌ ಸೊಬರದ ಮಠ ಸ್ವಾಮೀಜಿ ನೇತೃತ್ವದ ನಿಯೋಗವು, ‘ಉತ್ತರ ಕರ್ನಾಟಕದ ರೈತರ ಪಾಲಿಗೆ ಉಪಯುಕ್ತವಾದ ಈ ಯೋಜನೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು’ ಎಂದು ಒತ್ತಾಯಿಸಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !