ಯೂನಿಟ್‌ಗೆ 99.56 ಪೈಸೆ ಹೆಚ್ಚಿಸಲು ಸೆಸ್ಕ್‌ ಪ್ರಸ್ತಾವ

7

ಯೂನಿಟ್‌ಗೆ 99.56 ಪೈಸೆ ಹೆಚ್ಚಿಸಲು ಸೆಸ್ಕ್‌ ಪ್ರಸ್ತಾವ

Published:
Updated:

ಮೈಸೂರು: ವಿದ್ಯುತ್‌ ಶುಲ್ಕವನ್ನು ಪ್ರತಿ ಯೂನಿಟ್‌ಗೆ 99.56 ಪೈಸೆ ಹೆಚ್ಚಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಪ್ರಸ್ತಾವ ಇಟ್ಟಿದೆ.

ವಿದ್ಯುತ್‌ ದರ ಪರಿಷ್ಕರಣೆ ಅರ್ಜಿ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಶಂಭು ದಯಾಳ್‌ ಮೀನ ನೇತೃತ್ವದಲ್ಲಿ ಮಂಗಳವಾರ ಮೈಸೂರಿನಲ್ಲಿ ಸಾರ್ವಜನಿಕ ವಿಚಾರಣಾ ಸಭೆ ನಡೆಯಿತು.

2019–20ರ ಸಾಲಿನ ಕಂದಾಯ ಕೊರತೆ ಒಟ್ಟು ₹ 630.74 ಕೋಟಿಗಳಾಗಿದ್ದು, ಅದನ್ನು ಭರಿಸಲು ದರ ಏರಿಕೆ ಅನಿವಾರ್ಯ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಸಭೆಯಲ್ಲಿ ತಿಳಿಸಿದರು.

ಪ್ರಸ್ತಾವಕ್ಕೆ ವಿರೋಧ: ಕೈಗಾರಿಕೆಗಳು, ಸಂಘ ಸಂಸ್ಥೆಗಳು, ರೈತ ಸಂಘದ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಲೆ ಹೆಚ್ಚಳ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !