ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ವಿ.ವಿ ಕುಲಪತಿ ಹುದ್ದೆಗೆ ತಜ್ಞರ ನೇಮಕಕ್ಕೆ ಒತ್ತಾಯ

Last Updated 7 ಫೆಬ್ರುವರಿ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ’ಕ್ಕೆ ಕುಲಪತಿಯಾಗಿ ವಿಷಯ ತಜ್ಞರನ್ನೇ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರದರ್ಶಕ ಕಲೆಗಳ ಪದವೀಧರರ ಒಕ್ಕೂಟ ರಾಜ್ಯಪಾಲರಿಗೆ ಮನವಿ ಮಾಡಿದೆ.

ಈ ಸಂಬಂಧ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಒಕ್ಕೂಟದ ಅಧ್ಯಕ್ಷ ಡಾ.ಜನಾರ್ದನ ಅವರು ಪತ್ರ ಬರೆದಿದ್ದಾರೆ.

ವಿಷಯ ತಜ್ಞರಿಗೆ ಪ್ರದರ್ಶಕ ಕಲೆಗಳ ಕುರಿತ ಹಲವು ವಿಷಯಗಳ ಜ್ಞಾನ ಹೊಂದಿರುತ್ತಾರೆ. ಇದರಿಂದ ವಿಶ್ವವಿದ್ಯಾಲಯವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಾಯಕವಾಗುತ್ತದೆ ಎಂದು ಜನಾರ್ದನ ಪತ್ರದಲ್ಲಿ ಹೇಳಿದ್ದಾರೆ.

ಇತರ ವಿಷಯಗಳ ವಿಶ್ವವಿದ್ಯಾಲಯ ನಡೆಸುವುದಕ್ಕೂ, ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯ ನಡೆಸುವುದಕ್ಕೂಬಹಳ ವ್ಯತ್ಯಾಸವಿದೆ. ಲಪತಿಯಾದವರಿಗೆ ನಿರ್ದಿಷ್ಟ ವಿಷಯಗಳ ವಿಶ್ವವಿದ್ಯಾಲಯದ ಅಗತ್ಯತೆ ತಿಳಿದವರಷ್ಟೇ ಸಮರ್ಥವಾಗಿ ಮುನ್ನಡೆಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಂಗೀತ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಬಂದವರಿಗೆ ಪ್ರದರ್ಶಕ ಕಲಾ ವಿಷಯಗಳ ಹಿನ್ನೆಲೆ ಇರಲಿಲ್ಲ. ಇದರಿಂದ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಉದ್ದೇಶಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾದರು. ಮತ್ತೆ ಅಂತಹ ತಪ್ಪು ಆಗಬಾರದು. ಆದ ಕಾರಣ, ಪ್ರದರ್ಶಕ ಕಲೆಗಳ ಹಿನ್ನೆಲೆಯ ತಜ್ಞರನ್ನು ನೇಮಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT