ಮೇಕೇರಿ– ತಾಳತ್ತಮನೆ ಮಾರ್ಗದಲ್ಲಿ ಅಪಘಾತ: ಮಡಿಕೇರಿ ಬಿಜೆಪಿ ಮುಖಂಡ ಸಾವು

ಬುಧವಾರ, ಏಪ್ರಿಲ್ 24, 2019
32 °C

ಮೇಕೇರಿ– ತಾಳತ್ತಮನೆ ಮಾರ್ಗದಲ್ಲಿ ಅಪಘಾತ: ಮಡಿಕೇರಿ ಬಿಜೆಪಿ ಮುಖಂಡ ಸಾವು

Published:
Updated:
Prajavani

ಮಡಿಕೇರಿ: ತಾಲ್ಲೂಕಿನ ತಾಳತ್ತಮನೆ– ಮೇಕೇರಿ ಮಾರ್ಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ (42) ಮೃತಪಟ್ಟಿದ್ದಾರೆ.

ಲಾರಿ ಹಾಗೂ ಓಮ್ನಿ ನಡುವೆ ಅಪಘಾತವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸಂಪಾಜೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು. ಮೇಕೇರಿಯಿಂದ ಭಾಗಮಂಡಲ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ– 275 ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಬಾಲಚಂದ್ರ ಕೆಳಗಿ ಅವರು, ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಜಿಲ್ಲೆಯ ಗಡಿಭಾಗದಲ್ಲಿ ಪಕ್ಷ ಬೆಳೆಸಲು ಸಾಕಷ್ಟು ಶ್ರಮಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 7

  Sad
 • 2

  Frustrated
 • 1

  Angry

Comments:

0 comments

Write the first review for this !