ನಾಮಪತ್ರ ಸಲ್ಲಿಸದ ನಿಖಿಲ್‌

ಗುರುವಾರ , ಏಪ್ರಿಲ್ 25, 2019
29 °C

ನಾಮಪತ್ರ ಸಲ್ಲಿಸದ ನಿಖಿಲ್‌

Published:
Updated:

ಮಂಡ್ಯ: ಜ್ಯೋತಿಷಿಗಳ ಸಲಹೆಯಂತೆ ಗುರುವಾರ ನಿಗದಿಯಾಗಿದ್ದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯನ್ನು ಕೊನೆ ಗಳಿಗೆಯಲ್ಲಿ ಕೈಬಿಡಲಾಯಿತು. ಮಾರ್ಚ್‌ 25ರಂದು ಒಂದೇ ಬಾರಿಗೆ ನಾಮಪತ್ರ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕೇವಲ ಕುಟುಂಬ ಸದಸ್ಯರೊಂದಿಗೆ ನಿಖಿಲ್‌ ನಾಮಪತ್ರ ಸಲ್ಲಿಸುತ್ತಾರೆ ಎಂದು ಜೆಡಿಎಸ್‌ ಮುಖಂಡರು ತಿಳಿಸಿದ್ದರು.

‘ಗುರುವಾರ ಒಳ್ಳೆಯ ದಿನ’ ಎಂಬ ಜ್ಯೋತಿಷಿಗಳ ಸಲಹೆಗೆ ವರಿಷ್ಠ ಎಚ್‌.ಡಿ.ದೇವೇಗೌಡರು ಸಮಯ ನಿಗದಿ ಮಾಡಿದ್ದರು. ಆದರೆ ಎರಡು ದಿನ ನಾಮಪತ್ರ ಸಲ್ಲಿಸಿದರೆ ಜನರಲ್ಲಿ ಗೊಂದಲ ಉಂಟಾಗುತ್ತದೆ ಎಂಬ ಕಾರಣಕ್ಕೆ ಒಂದೇ ದಿನ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಸುಮಲತಾ ಸಮಾವೇಶಕ್ಕಿಂತ ಹೆಚ್ಚು ಜನರನ್ನು ಸೇರಿಸಿ, ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !