ಗುರುವಾರ , ಸೆಪ್ಟೆಂಬರ್ 19, 2019
29 °C

ಶಶಿ ತರೀಕೆರೆಗೆ ಛಂದ ಪುಸ್ತಕ ಬಹುಮಾನ

Published:
Updated:
Prajavani

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶಶಿ ತರೀಕೆರೆ ಅವರ ಕಥಾಸಂಕಲನದ ಹಸ್ತಪ್ರತಿಗೆ ಪ್ರಸಕ್ತ ಸಾಲಿನ ಛಂದ ಪುಸ್ತಕ ಬಹುಮಾನ ಸಂದಿದೆ.ಇಸ್ರೊದಲ್ಲಿ ಟೆಕ್ನಿಷಿಯನ್ ಆಗಿರುವ ಅವರು ಸಾಹಿತ್ಯ ಕೃಷಿ, ಕಿರುಚಿತ್ರ ನಿರ್ಮಾಣದಲ್ಲೂ ತೊಡಗಿದ್ದಾರೆ. ಕವಯತ್ರಿ ಲಲಿತಾ ಸಿದ್ಧಬಸವಯ್ಯ ತೀರ್ಪುಗಾರರಾಗಿದ್ದರು. 

ಪ್ರಶಸ್ತಿ ₹ 30,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ಒಳಗೊಂಡಿದೆ. ಅ.20ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಛಂದ ಪುಸ್ತಕದ ವಸುಧೇಂದ್ರ ತಿಳಿಸಿದ್ದಾರೆ.

Post Comments (+)