ಮಂಗಳವಾರ, ನವೆಂಬರ್ 12, 2019
26 °C

ಲೋಕ ಅದಾಲತ್‌: 65 ಸಾವಿರ ಪ್ರಕರಣ ವಿಲೇವಾರಿ

Published:
Updated:

ಬೆಂಗಳೂರು: ರಾಜ್ಯದಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 65,663 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

‘ಪ್ರಕರಣಗಳಲ್ಲಿ ರಾಜಿಯಾದ ಒಟ್ಟು ಮೊತ್ತ ₹ 309 ಕೋಟಿ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ್ ಹಂಚಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜಿ ಸಂಧಾನದ ಮೂಲಕ 59,804, ವ್ಯಾಜ್ಯಪೂರ್ವ 4,821 ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇದ್ದ 1,038 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ವಿವರಿಸಲಾಗಿದೆ.

ಪ್ರತಿಕ್ರಿಯಿಸಿ (+)