ಸರ್ಕಾರಿ ನೌಕರರ ವೇತನ ಕೈಸೇರಲು ವಿಳಂಬ

7
ಪರಿಷ್ಕೃತ ವೇತನದ ಬಾಕಿ ಮೊತ್ತ ಜುಲೈ ತಿಂಗಳಲ್ಲಿ ಬಟವಾಡೆ

ಸರ್ಕಾರಿ ನೌಕರರ ವೇತನ ಕೈಸೇರಲು ವಿಳಂಬ

Published:
Updated:

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸಿನಂತೆ, ರಾಜ್ಯ ಸರ್ಕಾರಿ ನೌಕರರಿಗೆ ಜೂನ್‌ ತಿಂಗಳಿನಿಂದ ಪರಿಷ್ಕೃತ ವೇತನ ಸಿಗಲಿದೆ. ಆದರೆ, ಕೈ ಸೇರಲು ಇನ್ನೂ ಕೆಲವು ದಿನ ಕಾಯಬೇಕು.

‘ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಲ್ಲಿ (ಎಚ್‌ಆರ್‌ಎಂಎಸ್) ನೂತನ ವೇತನ ಶ್ರೇಣಿ ಅಳವಡಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಕೆಲವು ತಾಂತ್ರಿಕ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಅದನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪರಿಷ್ಕೃತ ವೇತನ 2018ರ ಏಪ್ರಿಲ್‌ 1ರಿಂದಲೇ ಅನ್ವಯ ಆಗಲಿದೆ. ಇದರಿಂದ 5 ಲಕ್ಷಕ್ಕೂ ಹೆಚ್ಚು ನೌಕರರಿಗೆ ಲಾಭ ಸಿಗಲಿದೆ. ಏಪ್ರಿಲ್‌ ಮತ್ತು ಮೇ ತಿಂಗಳ ಬಾಕಿ ವೇತನ ಜುಲೈ ತಿಂಗಳ ವೇತನದ ಜೊತೆ ಬಟವಾಡೆ ಆಗಲಿದೆ.

‘ಪರಿಷ್ಕೃತ ವೇತನ ಪಟ್ಟಿ ಎಚ್‌ ಆರ್‌ಎಂಎಸ್‌ನಲ್ಲಿ ಸಮರ್ಪಕವಾಗಿ ಜನರೇಟ್‌ ಆಗುತ್ತಿಲ್ಲ. ಎಚ್‌ಆರ್‌ಎಂಎಸ್‌ನಲ್ಲಿ ಅಳವಡಿಸಿದ ಪ್ರತಿಯೊಬ್ಬ ಸಿಬ್ಬಂದಿಯ ಮಾಹಿತಿ ಖಜಾನೆಗೆ ತಲುಪಿದ ಬಳಿಕ ಎಲೆಕ್ಟ್ರಾನಿಕ್‌ ಕ್ಲೀಯರೆನ್ಸ್‌ ಸರ್ವೀಸಸ್‌ (ಇಎಸ್‌ಸಿ) ಮೂಲಕ ಖಾತೆಗಳಿಗೆ ಜಮೆ ಆಗಲಿದೆ. ಈ ವಾರದ ಕೊನೆ ಅಥವಾ ಮುಂದಿನ ವಾರ ಸಿಬ್ಬಂದಿಯ ಖಾತೆಗೆ ವೇತನ ಜಮೆ ಆಗಬಹುದು’ ಎಂದು ಎಚ್‌ಆರ್‌ಎಂಎಸ್‌ ಘಟಕದ ಅಧಿಕಾರಿಯೊಬ್ಬರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 2

  Sad
 • 1

  Frustrated
 • 8

  Angry

Comments:

0 comments

Write the first review for this !