ಭಾನುವಾರ, ಆಗಸ್ಟ್ 18, 2019
26 °C

ಸಿರುಗುಪ್ಪ: ತುಂಗಭದ್ರಾ ನದಿಯಲ್ಲಿ 7.5 ಸಾವಿರ ಪಂಪ್‌ಸೆಟ್‌ ಮುಳುಗಡೆ

Published:
Updated:
Prajavani

ಸಿರುಗುಪ್ಪ: ತುಂಗಭದ್ರಾ ನದಿಯ ತಟದಲ್ಲಿರುವ ತಾಲ್ಲೂಕಿನ 22 ಗ್ರಾಮಗಳ ಸುಮಾರು 7.5 ಸಾವಿರ ಏತನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳು ಮತ್ತು 350 ಟ್ರಾನ್ಸ್‌ಫಾರ್ಮರ್‌ಗಳು ಸೋಮವಾರ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ.

‘ವಿದ್ಯುತ್‌ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ’ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಾಫರ್‌ ತಿಳಿಸಿದರು.

‘ಮುಳುಗಿರುವ ಪಂಪ್‌ಸೆಟ್ ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಗ್ರಾಮ ಲೆಕ್ಕಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಹಶೀಲ್ದಾರ್‌ ದಯಾನಂದ ಪಾಟೀಲ್‌ ತಿಳಿಸಿದರು.

ತಾಲ್ಲೂಕಿನ ನದಿ ಪಾತ್ರದಲ್ಲಿ 11,150 ಏತನೀರಾವರಿ ಪಂಪ್‌ಸೆಟ್‌ಗಳಿದ್ದು. ಮುಳುಗಿ ಹಾನಿಯಾಗಿರುವ ಪಂಪ್‌ಸೆಟ್‌ಗಳ ಮಾಲೀಕರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಎನ್.ಮೋಹನ್ ಕುಮಾರ್ ಆಗ್ರಹಿಸಿದರು.

Post Comments (+)