ಆಧಾರ್ ತಿದ್ದುಪಡಿಗಾಗಿ ಜಾಗರಣೆ!

7
ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಸಮಸ್ಯೆ

ಆಧಾರ್ ತಿದ್ದುಪಡಿಗಾಗಿ ಜಾಗರಣೆ!

Published:
Updated:

ಮೈಸೂರು: ಆಧಾರ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಲು ರಾತ್ರಿಯಿಡೀ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ‌ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಒಟ್ಟು ಮೂರು ಆಧಾರ್ ಕೇಂದ್ರಗಳಿದ್ದು, ಎರಡು ಕೇಂದ್ರಗಳು ಕಾರ್ಯ ನಿರ್ವಹಿಸದೇ ಇರುವ ಕಾರಣ, ಒಂದು ಕೇಂದ್ರದ ಮೇಲೆ ಒತ್ತಡ ಉಂಟಾಗಿದೆ. ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 20 ಕಾರ್ಡ್‌ಗಳನ್ನು ಮಾತ್ರ ತಿದ್ದು‍ಪಡಿ ಮಾಡುವ ಅವಕಾಶ ಇದೆ.

ಕೇಂದ್ರ ತೆರೆಯುತ್ತಿದ್ದಂತೆ ಅವಕಾಶ ಪಡೆಯಲು ರಾತ್ರಿಯಿಡೀ ಸಾಲಿನಲ್ಲಿ ಜನ ನಿಲ್ಲುತ್ತಿದ್ದಾರೆ. ಇದಕ್ಕಾಗಿ ಬುತ್ತಿ, ಬಟ್ಟೆ, ಟೂತ್‌ ಪೇಸ್ಟ್‌, ಸೋಪಿನ ಸಮೇತ ಬ್ಯಾಂಕಿನ ಮುಂದೆ ಬೀಡುಬಿಟ್ಟಿದ್ದಾರೆ.

ತಾಲ್ಲೂಕು ಕಚೇರಿ, ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೀಪದಲ್ಲಿ ನೋಂದಣಿ ಕೇಂದ್ರಗಳಿವೆ. ಬ್ಯಾಂಕ್ ಸಮೀಪದಲ್ಲಿರುವ ಕೇಂದ್ರಕ್ಕೆ ತಾಲ್ಲೂಕಿನ ಎಲ್ಲೆಡೆಯಿಂದ ಸಾರ್ವಜನಿಕರು ಬರುತ್ತಿದ್ದು, ನೂಕು ನುಗ್ಗಲು ಉಂಟಾಗುತ್ತಿದೆ. ಪಕ್ಕದ ಸರಗೂರಿನಲ್ಲೂ ಇದೇ ಪರಿಸ್ಥಿತಿ ಇದ್ದು, ಜನ ತೊಳಲಾಡುವಂತೆ ಆಗಿದೆ.

ಒತ್ತಡ ಕಾರಣ

ತಾಲ್ಲೂಕು ಕಚೇರಿ, ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ ಕಾರ್ಯದೊತ್ತಡ ಇರುವ ಕಾರಣ ಹೀಗಾಗುತ್ತಿದೆ. ಅಲ್ಲದೆ, ಖಾಸಗಿ ಕೇಂದ್ರಗಳಲ್ಲಿ ತಿದ್ದು‍ಪಡಿ ಮಾಡುವುದನ್ನು ನಿಲ್ಲಿಸಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ಇದಲ್ಲದೆ, ಈ ಕೇಂದ್ರಗಳಲ್ಲಿ ತಾಂತ್ರಿಕ ದೋಷವೂ ಇದೆ. ಕೆಲವೆಡೆ ಆಧಾರ್‌ ಅಪ್ಲಿಕೇಷನ್‌ಗೆ ಲಾಗಿನ್‌ ಮಾಡಲಾಗುತ್ತಿಲ್ಲ. ಇದರಿಂದ, ಕೇಂದ್ರಗಳು ತೆರೆದಿದ್ದರೂ ದತ್ತಾಂಶ ಸೇರ್ಪಡೆ ಅಥವಾ ತಿದ್ದುಪಡಿ ಕಾರ್ಯ ನಡೆಯುತ್ತಿಲ್ಲ. ಇದು ತಾತ್ಕಾಲಿಕ ಸಮಸ್ಯೆಯಷ್ಟೆ ಎಂದು ಜಿಲ್ಲಾ ಆಧಾರ್‌ ಸಂಯೋಜಕಿ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

***

ಶೀಘ್ರವೇ ಎಲ್ಲ ಗ್ರಾ.ಪಂ ಕಚೇರಿಗಳಲ್ಲೂ ಆಧಾರ್‌ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಮಸ್ಯೆ ತಾತ್ಕಾಲಿಕ. ಅಲ್ಲಿಯವರೆಗೂ ಆಧಾರ್ ತಿದ್ದು‍ಪಡಿ ಶಿಬಿರಗಳನ್ನೂ ತಾಲ್ಲೂಕುಗಳಲ್ಲಿ ಮಾಡುತ್ತೇವೆ.
– ಲಕ್ಷ್ಮಿ, ಜಿಲ್ಲಾ ಆಧಾರ್ ಸಂಯೋಜಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !