ಗುರುವಾರ , ನವೆಂಬರ್ 21, 2019
21 °C

ಅಭಿಷೇಕ್‌ಗೆ ಇಲಿಯಾನಾ ಜೋಡಿ

Published:
Updated:
Prajavani

ಅಭಿಷೇಕ್‌ ಬಚ್ಚನ್‌ ಹಾಗೂ ಇಲಿಯಾನಾ ಡಿಕ್ರೂಸ್‌ ಜೋಡಿ ಕೂಕಿ ಗುಲಾಟಿ ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸಲಿದೆ.

ಅನುರಾಗ್‌ ಕಶ್ಯಪ್‌ ನಿರ್ದೇಶನದ ‘ಮನ್‌ಮರ್ಜಿಯಾ’ ಸಿನಿಮಾದಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದ ಅಭಿಷೇಕ್‌ಗೆ ಬಾಲಿವುಡ್‌ನಲ್ಲಿ ಅವಕಾಶಗಳು ಹೆಚ್ಚುತ್ತಿವೆ.

ಹೆಸರಿಡದ ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಈ ವಿಷಯವನ್ನು ಅಭಿಷೇಕ್‌ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಭಿಷೇಕ್‌ ಜೊತೆ ಈ ಸಿನಿಮಾದಲ್ಲಿ ಅಜಯ್‌ ದೇವಗನ್‌ ನಟಿಸುತ್ತಿರುವುದು ವಿಶೇಷ. ‘ಬೋಲ್‌ ಬಚ್ಚನ್‌’ ಬಳಿಕ ನಾಯಕರಿಬ್ಬರು ಈ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.

‘ವೃತ್ತಿಜೀವನದಲ್ಲಿ ನಾನು ಹೊಸದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಈ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ ಗುಲಾಟಿ ಹಾಗೂ ಅಜಯ್‌ಗೆ ಅಭಿನಂದನೆ ಹೇಳಲೇಬೇಕು’ ಎಂದು ಅಭಿಷೇಕ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾದ ಸ್ಕ್ರಿಪ್ಟ್ ಸಿದ್ಧಗೊಂಡಿದೆ. 1990ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಇದರ ಪರಿಣಾಮಗಳನ್ನು ತೆರೆಯ ಮೇಲೆ ತೋರಿಸಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)