ಶನಿವಾರ, ಆಗಸ್ಟ್ 17, 2019
27 °C
-

ಕಟೌಟ್‌ಗಳ ಭರಾಟೆ

Published:
Updated:

ಬಾಗಲಕೋಟೆ: ಇಲ್ಲಿನ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರಿಗೆ ಬೆಂಗಳೂರಿನ ವರ್ಚ್ಯುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಹೆಸರಿನ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿದೆ.

ಪ್ರಮುಖ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ ಅವರು ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್‌ನ ಗರಿಮೆ ಪಡೆದಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಆ ದಿನ ಅವರ ದೊಡ್ಡ ಕಟೌಟ್ ಜೊತೆಗೆ ಬೆಂಬಲಿಗರಿಂದ ಶುಭಾಶಯಗಳ ಮಹಾಪೂರವೇ ಹರಿದಿತ್ತು.

ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಅವರಿಗೆ ಸಮಾಜಸೇವೆ ವಿಭಾಗದಲ್ಲಿ ಆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಈ ವಿಚಾರವನ್ನು ಮಾಧ್ಯಮಗಳ ಕಚೇರಿಗೆ ಕಳುಹಿಸಿದ್ದ ವಿವರದಲ್ಲಿ ಅವರೇ ಉಲ್ಲೇಖಿಸಿದ್ದರು. ತಮ್ಮೊಂದಿಗೆ ದೇಶದ ಇತರೆಡೆಯ 32 ಮಂದಿ ಗೌರವ ಡಾಕ್ಟರೇಟ್‌ಗೆ ಭಾಜನರಾದ ವಿಚಾರವನ್ನು ತಿಳಿಸಿದ್ದರು.

ಇವನ್ನೂ ಓದಿ: 

* ‘ಗೌಡಾ’ ಸ್ವೀಕಾರಕ್ಕೆ ವಿಮಾನದಲ್ಲಿ ಪ್ರಯಾಣ
* ಗೌರವ ಡಾಕ್ಟರೇಟ್‌ ಪದವಿ ಸಂಭ್ರಮ: ಪರಿಶ್ರಮವಿಲ್ಲದೆ ಪದವಿ ಸಂಪಾದನೆ
* ಆಸಾಮಿ ನೋಡಿ ರೇಟು ಫಿಕ್ಸ್‌
* ವರ್ಷದಲ್ಲಿ ಚಿಕ್ಕಬಳ್ಳಾಪುರಕ್ಕೆ 13 ‘ಗೌಡಾ’
* ಸ್ವಾಮೀಜಿ, ಎಫ್‌ಡಿಎ,ದಿನಸಿ ವ್ಯಾಪಾರಿಯೂ ‘ಸಾಧಕರು’!
* ಫೋನುಗಳೆಲ್ಲ ಸ್ವಿಚ್ಡ್‌ ಆಫ್!
* ಗೊತ್ತಿಲ್ಲದ ವಿ.ವಿಗಳ ಗೌರವ ಡಾಕ್ಟರೇಟ್‌

Post Comments (+)