ಐದು ರೈಲುಗಳಲ್ಲಿ ಎ.ಸಿ ಪ್ರಯಾಣ ದರ ಇಳಿಕೆ

7

ಐದು ರೈಲುಗಳಲ್ಲಿ ಎ.ಸಿ ಪ್ರಯಾಣ ದರ ಇಳಿಕೆ

Published:
Updated:

ಬೆಂಗಳೂರು– ಮೈಸೂರು ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಪ್ರಯಾಣ ದರದ ರಿಯಾಯಿತಿ ಯೋಜನೆಯನ್ನು ಇತರ ಐದು ರೈಲುಗಳಿಗೆ ನೈರುತ್ಯ ರೈಲ್ವೆ ವಿಸ್ತರಿಸಿದೆ. ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಮಾತ್ರ ಇದು ಅನ್ವಯಿಸಲಿದೆ.

ಹುಬ್ಬಳ್ಳಿ– ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಎ.ಸಿ 3–ಟಯರ್‌ ದರವನ್ನು ಆ.4ರಿಂದಲೇ ₹735ರಿಂದ ₹590ಕ್ಕೆ ಇಳಿಸಲಾಗಿದೆ. ಯಶವಂತಪುರ– ಬಿಕಾನೇರ್‌ ಎಕ್ಸ್‌ಪ್ರೆಸ್‌ ರೈಲಿನ ಯಶವಂತಪುರ– ಹುಬ್ಬಳ್ಳಿವರೆಗಿನ ಪ್ರಯಾಣ ದರವನ್ನು ₹735ರಿಂದ ₹590ಕ್ಕೆ ಇಳಿಸಲಾಗಿದೆ. ಇದು ನ.30ರಿಂದ ಜಾರಿಗೆ ಬರಲಿದೆ.

ನ.28ರಿಂದ ಗದಗ– ಮುಂಬೈ ಎಕ್ಸ್‌ಪ್ರೆಸ್ ರೈಲಿನ ಗದಗ– ಸೊಲ್ಲಾಪುರ ನಡುವಿನ ಪ್ರಯಾಣ ದರವನ್ನು ₹495ರಿಂದ 435ಕ್ಕೆ, ಡಿ.3ರಿಂದ ಮೈಸೂರು– ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ನ ಮೈಸೂರು– ಬೆಂಗಳೂರು ನಡುವಿನ ದರವನ್ನು ₹ 495ರಿಂದ ₹ 260ಕ್ಕೆ ಹಾಗೂ ನ.22ರಿಂದ ಯಶವಂತಪುರ– ಸಿಕಂದರಾಬಾದ್ ರೈಲಿನ ಯಶವಂತಪುರ– ಧರ್ಮಾವರಂ ನಡುವಿನ ಪ್ರಯಾಣ ದರ ₹345 ರಿಂದ 305ಕ್ಕೆ ಇಳಿಯಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ತಿಳಿಸಿದ್ದಾರೆ.

ಹವಾನಿಯಂತ್ರಿತ ಬೋಗಿಗಳಲ್ಲಿ ಹೆಚ್ಚು ಜನರು ಪ್ರಯಾಣಿಸುತ್ತಿರಲಿಲ್ಲ. ಈ ಕಾರಣದಿಂದ ಪ್ರಯಾಣ ದರ ಇಳಿಸಿದ್ದು, ಇದರಿಂದ ಪ್ರಯಾಣಿಕರು ಮತ್ತು ರೈಲ್ವೆಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !