ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳಿಗೆ ಅನುದಾನ ಕಡಿತ

Last Updated 29 ಮೇ 2019, 18:13 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನ ಕಡಿತ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾಂಸ್ಕೃತಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬಹುತೇಕ ಅಕಾಡೆಮಿಗಳಿಗೆ ಈಗ ನೀಡುತ್ತಿರುವ ಅನುದಾನದಲ್ಲಿ ಶೇ 40ರಷ್ಟು ಕಡಿತ ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಮೂಲಗಳು ಹೇಳಿವೆ.

ನಾಡಿನ ಸಂಸ್ಕೃತಿಯನ್ನು ರಕ್ಷಿಸಿ, ಬೆಳೆಸುವಲ್ಲಿ ನಿರತವಾಗಿರುವ ಅಕಾಡೆಮಿಗಳಿಗೆ ಆರ್ಥಿಕ ನೆರವು ಕಡಿಮೆ ಮಾಡಿ
ದರೆ, ಕಷ್ಟಕರವಾಗಲಿದೆ. ಆಯಾ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಮುಂದುವರಿಕೊಂಡು ಹೋಗುವುದು ಸಾಧ್ಯವಾಗದು ಎಂಬ ಆತಂಕವನ್ನು ಅಕಾಡೆಮಿಗಳ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ನಾಟಕ ಅಕಾಡೆಮಿಗೆ ಕಳೆದ ವರ್ಷ ₹1.20 ಕೋಟಿ ಅನುದಾನ ನೀಡಲಾಗಿದ್ದು, ಈ ಸಲ ಕಡಿತ ಮಾಡಲಾ
ಗಿದೆ.ಕಳೆದ ವರ್ಷಕ್ಕಿಂತ ₹40 ಲಕ್ಷ ಅನುದಾನವನ್ನು ಕಡಿಮೆ ಮಾಡಿದ್ದು, ಈ ವರ್ಷಕ್ಕೆ ₹80 ಲಕ್ಷ ನಿಗದಿಪಡಿಸಲಾಗಿದೆ. ಇಷ್ಟು ಅತ್ಯಲ್ಪ ಹಣ ತೆಗೆದುಕೊಂಡು ಯಾವ ಕೆಲಸವನ್ನೂ ಮಾಡಲಾಗದು’ ಎಂದುನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT