ಶಿಕ್ಷಣ ಇಲಾಖೆ ಎಫ್‌ಡಿಎ ಎಸಿಬಿ ಬಲೆಗೆ

7

ಶಿಕ್ಷಣ ಇಲಾಖೆ ಎಫ್‌ಡಿಎ ಎಸಿಬಿ ಬಲೆಗೆ

Published:
Updated:

ಬೆಂಗಳೂರು: ಕಡತವೊಂದನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸುವುದಕ್ಕಾಗಿ ₹20 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್‌ಡಿಎ ಪಂಚಾಕ್ಷರಿ ಅವರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಸೇಂಟ್ ಜಾನ್ಸ್ ರಸ್ತೆಯಲ್ಲಿರುವ ಬಿ.ಎಂ.ಇಂಗ್ಲಿಷ್ ಶಾಲೆಯನ್ನು ಅನುದಾನರಹಿತ ಶಾಲೆಯೆಂದು ಪರಿಗಣಿಸುವಂತೆ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಇಲಾಖೆಯ ಕೆ.ಆರ್‌.ವೃತ್ತದ ಉಪನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುವ ಪಂಚಾಕ್ಷರಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ದಾಳಿ ಮಾಡಿ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !