ಅಪಘಾತ: ನಟ ಜೈಜಗದೀಶ್ ಪಾರು

7

ಅಪಘಾತ: ನಟ ಜೈಜಗದೀಶ್ ಪಾರು

Published:
Updated:

ಚನ್ನರಾಯಪಟ್ಟಣ: ಚಿತ್ರನಟ ಜೈಜಗದೀಶ್‌ ಪ್ರಯಾಣ ಮಾಡುತ್ತಿದ್ದ ಕಾರು ಶುಕ್ರವಾರ ಸಂಜೆ ಇಲ್ಲಿ ಅಪಘಾತಕ್ಕೆ ಈಡಾಗಿದೆ. ಸಣ್ಣಪ್ರಮಾಣದ ಗಾಯಗಳೊಂದಿಗೆ ಪಾರಾಗಿದ್ದಾರೆ.

ಸೋಮವಾರಪೇಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ತಾಲ್ಲೂಕಿನ ಪೋತನಹಳ್ಳಿ ಬಳಿ ಬೈಕ್‌ ಅಡ್ಡಬಂದಿದೆ. ಅಪಘಾತ ತಪ್ಪಿಸಲು ಹೋಗಿ ಕಾರು ಗದ್ದೆಗೆ ನುಗ್ಗಿದೆ.

ಜೈಜಗದೀಶ್‌ ಅವರ ದವಡೆಗೆ ಗಾಯವಾಗಿದೆ. ಆಂಬುಲೆನ್ಸ್‌ನಲ್ಲಿ ಕರೆತಂದು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !