ಶ್ರೀ ದುರ್ಗಾಂಬಾ ಬಸ್‌ ಮಾಲೀಕ ಅಪಘಾತಕ್ಕೆ ಬಲಿ

7

ಶ್ರೀ ದುರ್ಗಾಂಬಾ ಬಸ್‌ ಮಾಲೀಕ ಅಪಘಾತಕ್ಕೆ ಬಲಿ

Published:
Updated:
Deccan Herald

ಕುಂದಾಪುರ: ಶ್ರೀ ದುರ್ಗಾಂಬಾ ಮೋಟಾರ್ಸ್‌ನ ಪಾಲುದಾರರಲ್ಲಿ ಒಬ್ಬರಾಗಿದ್ದ ಎಸ್‌.ಸುನೀಲ್‌ ಚಾತ್ರ (42) ಅವರು ಶುಕ್ರವಾರ ಮಧ್ಯಾಹ್ನ ತಮಿಳುನಾಡಿನ ಕರೂರ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಕುಂದಾಪುರದಲ್ಲಿ ಗುರುವಾರ ಕುಟುಂಬ ಸದಸ್ಯರೊಂದಿಗೆ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದ ಅವರು, ಶುಕ್ರವಾರ ಕರೂರ್‌ ಬಳಿಯ ಬಸ್‌ ಬಾಡಿ ಕೋಚ್‌ ಕಂಪನಿಯಲ್ಲಿ ಸಿದ್ಧಗೊಳ್ಳುತ್ತಿದ್ದ ತಮ್ಮ ಹೊಸ ಬಸ್‌ಗಳ ಪರಿಶೀಲನೆಗೆ ಚಾಲಕನೊಂದಿಗೆ ಪಜಿರೋ ವಾಹನದಲ್ಲಿ ತೆರಳಿದ್ದರು. ಈ ವೇಳೆ ಕರೂರು ಹೊರ ವಲಯದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆಯಿಂದ ಹೊರಕ್ಕೆಉರುಳಿ ಬದಿಯಲ್ಲಿನ ತಡೆಗೋಡೆಗೆ ಅಪ್ಪಳಿಸಿದೆ. ಈ ವೇಳೆ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾದಿಂದ ಸುನೀಲ್‌ ಸ್ಥಳದಲ್ಲಿಯೇ ಮೃತಪಟ್ಟರು. ಚಾಲಕ  ತೀವ್ರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !