ಶುಕ್ರವಾರ, ನವೆಂಬರ್ 22, 2019
23 °C

ಕಾರು, ಕ್ರೂಸರ್ ನಡುವೆ ಅಪಘಾತ: ಶೋಭಯಾತ್ರೆಗೆ ಬಂದಿದ್ದ ನಾಲ್ವರು ಸ್ಥಳದಲ್ಲೇ ಸಾವು

Published:
Updated:

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಮತ್ತು ಕ್ರೂಸರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗೌತಮ್ ಸಿಂಗ್, ಮದನ್ ಸಿಂಗ್, ಮುಖೇಶ್ ಸಿಂಗ್ ಹಾಗೂ ಕ್ರೂಸರ್ ಚಾಲಕ ಲೋಕೇಶ್ ಮೃತಪಟ್ಟರು.

ಚಿತ್ರದುರ್ಗದಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಲೋಕೇಶ್ ಕ್ರೂಸರ್‌ನಲ್ಲಿ ಬಂದಿದ್ದರು. ಗಣಪತಿ ವಿಸರ್ಜನೆ ಮಹೋತ್ಸವ ಮುಗಿಸಿ ಭಾನುವಾರ ನಸುಕಿನಲ್ಲಿ ಅರಸೀಕೆರೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಗೌತಮ್ ಸಿಂಗ್ ಹಾಗೂ ಸ್ನೇಹಿತರು ವೈಯಕ್ತಿಕ ಕೆಲಸಕ್ಕೆ ಹೊಸದುರ್ಗಕ್ಕೆ ಬರುತ್ತಿದ್ದರು.

ಹೊಸದುರ್ಗದಿಂದ ಅರಸೀಕೆರೆ ಕಡೆಗೆ ಹೊರಟಿದ್ದ ಕ್ರೂಸರ್ ಹಾಗೂ ಹೊಸದುರ್ಗ ಕಡೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ. ಕಾರಿನಲ್ಲಿದ್ದ ಮೂವರು ಹಾಗೂ ಕ್ರೂಸರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೊಸದುರ್ಗ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)