ಪಾದಚಾರಿ ಸಾವು: ಚಾಲಕನಿಗೆ ಜೈಲು ಶಿಕ್ಷೆ

7

ಪಾದಚಾರಿ ಸಾವು: ಚಾಲಕನಿಗೆ ಜೈಲು ಶಿಕ್ಷೆ

Published:
Updated:

ಬೆಂಗಳೂರು: ವಾಹನವನ್ನು ಪಾದಚಾರಿಗೆ ಗುದ್ದಿಸಿ ಸಾವಿಗೆ ಕಾರಣನಾದ ಚಾಲಕ ಆರ್‌. ಹರೀಶ್‌ (32) ಎಂಬಾತನಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ವಾಹನದ ಮಾಲೀಕರಾದ ಲಕ್ಷ್ಮಿದೇವಿಗೆ ₹3,000 ದಂಡ ವಿಧಿಸಿ ನಗರದ 5ನೇ ಸಂಚಾರ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪರಾಧಿ ಹರೀಶ್, ಸರಕು ಸಾಗಣೆ ವಾಹನ ಚಲಾಯಿಸಿಕೊಂಡು 2016ರ ಮೇ 11ರಂದು ಸದಾಶಿವನಗರದ ಟಿ.ಚೌಡಯ್ಯ ರಸ್ತೆಯಲ್ಲಿ ಹೊರಟಿದ್ದ. ನಿರ್ಲಕ್ಷ್ಯದಿಂದ ವಾಹನ ಓಡಿಸಿ ಪಾದಚಾರಿ ಮಂಜುನಾಥ್‌ (35) ಅವರಿಗೆ ಗುದ್ದಿಸಿದ್ದ. ತೀವ್ರ ಗಾಯಗೊಂಡಿದ್ದ ಮಂಜುನಾಥ್‌ ಮೃತಪಟ್ಟಿದ್ದರು.

ಘಟನೆ ಸಂಬಂಧ ಚಾಲಕ ಹಾಗೂ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪೂಜಾ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್‌ ಮಧು ಎ.ವಿ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !