ಸೈಕಲ್‌ಗೆ ಗುದ್ದಿ ಪ್ರಾಣ ಬಿಟ್ಟ ಬೈಕ್ ಸವಾರ

7

ಸೈಕಲ್‌ಗೆ ಗುದ್ದಿ ಪ್ರಾಣ ಬಿಟ್ಟ ಬೈಕ್ ಸವಾರ

Published:
Updated:

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಪಘಾತಗಳಲ್ಲಿ ರೈತ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ದೇವನಹಳ್ಳಿ ಸಮೀಪದ ಚಿಕ್ಕಸನ್ನೆ ಸರ್ವಿಸ್ ರಸ್ತೆಯಲ್ಲಿ ಸೈಕಲ್‌ಗೆ ಬೈಕ್‌ ಗುದ್ದಿಸಿ ಕೆಳಗೆ ಬಿದ್ದಿದ್ದ ಸವಾರ ಚರಣ್‌ ರಾಜ್ (25), ತಲೆಗೆ ತೀವ್ರ ಪೆಟ್ಟು ಬಿದ್ದು ಅಸುನೀಗಿದ್ದಾರೆ. ಮಂಡಿಬೆಲೆ ನಿವಾಸಿಯಾದ ಅವರು, ರೈತರಾಗಿದ್ದರು.

‘ಚರಣ್ ರಾಜ್, ಹೆಲ್ಮೆಟ್ ಧರಿಸಿರಲಿಲ್ಲ. ಕೆಳಗೆ ಬೀಳುತ್ತಿದ್ದಂತೆ ತಲೆಗೆ ಪೆಟ್ಟಾಗಿ, ಕಿವಿಯಲ್ಲಿ ರಕ್ತ ಬರಲಾರಂಭಿಸಿತ್ತು. ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು. ಸೈಕಲ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ’ ಎಂದು ದೇವನಹಳ್ಳಿ ಸಂಚಾರ ಪೊಲೀಸರು ಹೇಳಿದರು.

ಇನ್ನೊಂದು ಪ್ರಕರಣದಲ್ಲಿ, ಬಳ್ಳಾರಿ ರಸ್ತೆಯ ಬೆಟ್ಟದ ಹಲಸೂರು ವೃತ್ತದ ಬಳಿ ಕಾರು ಗುದ್ದಿದ್ದರಿಂದ ಪಾದಚಾರಿ ಶ್ರೀನಿವಾಸ್ (42) ಎಂಬುವರು ಮೃತಪಟ್ಟಿದ್ದಾರೆ.

ಸೊಣ್ಣಪ್ಪನಹಳ್ಳಿ ನಿವಾಸಿಯಾದ ಅವರು, ಬುಧವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದರು.

ರೈಲು ಗುದ್ದಿ ಸಾವು: ದೇವನಗುಂದಿ ರೈಲ್ವೆ ನಿಲ್ದಾಣ ಸಮೀಪ ರೈಲು ಗುದ್ದಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಅವರ ಹೆಸರು, ವಿಳಾಸ ಗೊತ್ತಾಗಿಲ್ಲ. 50ರಿಂದ 60 ವಯಸ್ಸಾಗಿದೆ. ಹಳಿ ದಾಟುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಶವ ಇರಿಸಲಾಗಿದೆ ಎಂದು ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !