ಒಂದೇ ಕುಟುಂಬದ ನಾಲ್ವರು ಜಲಸಮಾಧಿ

7

ಒಂದೇ ಕುಟುಂಬದ ನಾಲ್ವರು ಜಲಸಮಾಧಿ

Published:
Updated:
Deccan Herald

ಬೆಟ್ಟದಪುರ (ಮೈಸೂರು): ಇಲ್ಲಿನ ಮರಟಿಕೊಪ್ಪಲು ಗ್ರಾಮದ ಬಳಿ ಸೋಮವಾರ ಮಾರುತಿ ಓಮ್ನಿ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಪಳನಿಸ್ವಾಮಿ (45), ಪತ್ನಿ ಸಂಜುಕುಮಾರಿ (38), ಪುತ್ರಿ ಪೂರ್ಣಿಮಾ (18) ಹಾಗೂ ಪುತ್ರ ಲಿಖಿತ್ (16) ಮೃತಪಟ್ಟವರು.

ಲಕ್ಷ್ಮೀಪುರ ಗ್ರಾಮದಿಂದ ಕೊಡಗಿನ ನಾಪೋಕ್ಲುವಿಗೆ ಕೂಲಿ ಕೆಲಸಕ್ಕೆ ವಲಸೆ ಹೋಗಿ ಅಲ್ಲಿಯೇ ವಾಸವಿದ್ದರು. ಮಕ್ಕಳಾದ ಪೂರ್ಣಿಮಾ ಹಾಗೂ ಲಿಖಿತ್ ಇಬ್ಬರೂ ಅಂಗವಿಕಲರಾಗಿದ್ದು, ಅಂಗವಿಕಲರ ವೇತನ ಪಡೆಯಲು ದೊಡ್ಡಕಮರವಳ್ಳಿಯ ಅಂಚೆ ಕಚೇರಿಗೆ ತೆರಳುವಾಗ ನಿಯಂತ್ರಣ ತಪ್ಪಿ ಹಾರಂಗಿ ನಾಲೆಯೊಳಗೆ ವ್ಯಾನ್ ಉರುಳಿದೆ. ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ವ್ಯಾನ್ ಸಂಪೂರ್ಣ ಮುಳುಗಿದೆ. ಸಾರ್ವಜನಿಕರು ವ್ಯಾನ್‌ ಮೇಲೆತ್ತುವಷ್ಟರಲ್ಲಿ ಎಲ್ಲರೂ ಮೃತಪಟ್ಟಿದ್ದರು.

ತಂದೆ ವಿರುದ್ಧ ಸಾಕ್ಷ್ಯ ನುಡಿದ ಬಾಲಕನ ಶೈಕ್ಷಣಿಕ ದತ್ತು ಪಡೆದ ಶಾಲೆ

ಚಿತ್ರದುರ್ಗ: ತಾಯಿಯನ್ನು ಕೊಲೆಗೈದ ತಂದೆಯ ವಿರುದ್ಧ ಸಾಕ್ಷ್ಯ ನುಡಿದು 13 ದಿನಗಳಲ್ಲಿ ಪ್ರಕರಣ ವಿಲೇವಾರಿಗೆ ಸಹಕರಿಸಿದ ಮೂರೂವರೆ ವರ್ಷದ ಬಾಲಕ ಧನುಷ್‌ನನ್ನು ಕೆ.ಕೆ. ನ್ಯಾಷನಲ್‌ ಶಿಕ್ಷಣ ಸಂಸ್ಥೆ ಸೋಮವಾರ ಶೈಕ್ಷಣಿಕ ದತ್ತು ಪಡೆಯಿತು.

ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಧನುಷ್‌ ಹಾಗೂ ಅವನ ಕಿರಿಯ ಸಹೋದರ ಮೈಲಾರಿ (2) ಅಜ್ಜಿ–ತಾತನ ಆಶ್ರಯದಲ್ಲಿದ್ದಾರೆ. ಮೊಮ್ಮಕ್ಕಳನ್ನು ಜೋಪಾನ ಮಾಡುತ್ತಿರುವ ವೃದ್ಧ ಜೀವಗಳಿಗೆ ಹೆಗಲು ಕೊಡುವ ಉದ್ದೇಶದಿಂದ ಒಬ್ಬ ಬಾಲಕನ ಶಿಕ್ಷಣದ ವೆಚ್ಚವನ್ನು ಭರಿಸಲು ಸಂಸ್ಥೆಯ ಅಧ್ಯಕ್ಷ ಡಾ.ಎಚ್‌.ಆರ್‌. ಮಂಜುನಾಥ್‌ ಮುಂದೆ ಬಂದಿದ್ದಾರೆ. ತ್ವರಿತಗತಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿದ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಸಮ್ಮುಖದಲ್ಲಿ ದತ್ತು ಪ್ರಕ್ರಿಯೆ ನಡೆಯಿತು.

‘ಎಸ್‌ಎಸ್‌ಎಲ್‌ಸಿವರೆಗಿನ ಶೈಕ್ಷಣಿಕ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇವೆ. ಮಗುವಿಗೆ ಓದಿನಲ್ಲಿ ಆಸಕ್ತಿ ಇದ್ದರೆ ಉನ್ನತ ಶಿಕ್ಷಣ ಕೊಡಿಸಲು ತಯಾರಿದ್ದೇವೆ’ ಎಂದು ಮಂಜುನಾಥ್‌ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಬಗ್ಗಲರಂಗವ್ವನಹಳ್ಳಿಯ ಶ್ರೀಧರ್ (28) ಪತ್ನಿ ಸಾಕಮ್ಮ (26) ಅವರನ್ನು ಜೂನ್‌ 27ರಂದು ಕೊಲೆ ಮಾಡಿದ್ದನು. ಕೊಲೆ ಮಾಡಿದ್ದನ್ನು ನೋಡಿದ್ದ ಧನುಷ್‌ ನುಡಿದ ಸಾಕ್ಷ್ಯದ ಆಧಾರದ ಮೇರೆಗೆ ನ್ಯಾಯಾಧೀಶರು ಜುಲೈ 9ರಂದು ಶಿಕ್ಷೆ ವಿಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !