7

ತರಬೇತಿಗೆ ಗೈರಾದ ಉಪನ್ಯಾಸಕರ ವಿರುದ್ಧ ಕ್ರಮ

Published:
Updated:

ಬೆಂಗಳೂರು: 2018–19ನೇ ಶೈಕ್ಷಣಿಕ ಸಾಲಿನ ಜೂನ್‌ ತಿಂಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಉಪನ್ಯಾಸಕರುಗಳ ತರಬೇತಿ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ನಿರ್ಧರಿಸಿದೆ.

ಸರ್ಕಾರಿ ಹಾಗೂ ಅನುದಾನಿ ಪದವಿಪೂರ್ವ ಕಾಲೇಜುಗಳ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳ ಉಪನ್ಯಾಸಕರಿಗೆ ಕಳೆದು ತಿಂಗಳು 7 ದಿನಗಳ ಕಾಲ ತರಬೇತಿ ಕಾರ್ಯಕ್ರಮ ನಡೆದಿತ್ತು. ‘ತರಬೇತಿಗೆ ಬಂದವರ ಹಾಜರಾತಿಯನ್ನು ಪ್ರತಿದಿನ ಬಯೋಮೆಟ್ರಿಕ್‌ನಲ್ಲಿ ಪಡೆಯಲಾಗಿದೆ. ಜಿಲ್ಲಾ ಉಪನಿರ್ದೇಶಕರು,   ಗೈರು ಹಾಜರಾದ ಉಪನ್ಯಾಸಕರಿಂದ ಆಯಾ ದಿನವೇ ಕಾರಣ ಕೇಳಿ ನೋಟಿಸ್‌ ನೀಡಿರುವ ಬಗ್ಗೆ ಇ–ಮೇಲ್‌ ಮೂಲಕ ನಿರ್ದೇಶಕರಿಗೆ ಮಾಹಿತಿ ನೀಡಬೇಕು’ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ದಾಖಲಾತಿ ಅವಧಿ ವಿಸ್ತರಣೆ: 2018–19ನೇ ಸಾಲಿನ ಪ್ರಥಮ ಪಿಯು ತರಗತಿಗೆ ದಂಡ ಶುಲ್ಕದೊಂದಿದೆ (₹2890) ದಾಖಲಾತಿಯಾಗಲು ಇದೇ 16ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಸಾಲಿನಲ್ಲಿ ಮತ್ತೊಮ್ಮೆ ಅವಧಿ ವಿಸ್ತರಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !