ಸಿಸಿಬಿ ಕಚೇರಿಗೆ ಸಾಧು ಕೋಕಿಲ

7

ಸಿಸಿಬಿ ಕಚೇರಿಗೆ ಸಾಧು ಕೋಕಿಲ

Published:
Updated:

ಬೆಂಗಳೂರು: ‘ರೌಡಿ ಶೀಟರ್‌ ಸೈಕಲ್ ರವಿ ಜತೆ ಹಾಸ್ಯನಟ ಸಾಧು ಕೋಕಿಲ ಒಡನಾಟವಿಟ್ಟುಕೊಂಡಿದ್ದರು’ ಎಂಬ ಸುದ್ದಿ ಹರಡಿದ್ದರಿಂದಾಗಿ, ಸಾಧು ಕೋಕಿಲ ಅವರು ಸ್ವಯಂಪ್ರೇರಿತವಾಗಿ ಸಿಸಿಬಿ ಕಚೇರಿಗೆ ಸೋಮವಾರ ಭೇಟಿ ನೀಡಿದರು.

ಕಚೇರಿಗೆ ಬೆಳಿಗ್ಗೆ ಹೋಗಿದ್ದ ಅವರು, ಸಿಸಿಬಿಯ ಹಿರಿಯ ಅಧಿಕಾರಿಯನ್ನು ಭೇಟಿಯಾದರು. ‘ನನಗೂ ರೌಡಿಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ಏಕೆ ಬರುತ್ತಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದರು ಎನ್ನಲಾಗಿದೆ.

ಹಿರಿಯ ಅಧಿಕಾರಿ, ‘ರೌಡಿ ಜತೆ ಒಡನಾಟವಿತ್ತು ಎಂದು ನಾವು ಹೇಳಿಲ್ಲ. ಆ ಬಗ್ಗೆ ಪುರಾವೆಗಳೂ ಇಲ್ಲ. ಏನಾದರೂ ಇದ್ದರೆ ನಾವೇ ಕರೆಯುತ್ತಿದ್ದೆವು. ನೀವು ಏಕೆ ಕಚೇರಿಗೆ ಬಂದೀರಿ’ ಎಂದು ಹೇಳಿ, ವಾಪಸ್‌ ಕಳುಹಿಸಿದರು ಎಂದು ಗೊತ್ತಾಗಿದೆ.

ಕಚೇರಿಯಿಂದ ಹೊರಬಂದ ಸಾಧು ಕೋಕಿಲ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

ಜೆಡಿಎಸ್ ಮುಖಂಡನಿಂದ ಮಾಹಿತಿ: ಸೈಕಲ್ ರವಿ ಜತೆ ಒಡನಾಟವಿಟ್ಟುಕೊಂಡಿದ್ದರು ಎನ್ನಲಾದ ಚಾಮರಾಜಪೇಟೆಯ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಅವರಿಂದ ಸಿಸಿಬಿ ಅಧಿಕಾರಿಗಳು ಸೋಮವಾರ ಮಾಹಿತಿ ಪಡೆದುಕೊಂಡರು.

‘ರವಿ ಕೃತ್ಯಗಳ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಅಲ್ತಾಫ್‌ ಅವರನ್ನು ಭೇಟಿಯಾಗಿದ್ದೆವು’ ಎಂದು ಅಧಿಕಾರಿಯೊಬ್ಬರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !