ಬುಧವಾರ, ನವೆಂಬರ್ 13, 2019
28 °C

ನಟಿ ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ

Published:
Updated:
Prajavani

ವಿರಾಜಪೇಟೆ (ಕೊಡಗು): ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಉದ್ದಪಂಡ ಪೂಣಚ್ಚ (74) ಅವರು ಸೋಮವಾರ ನಿಧನರಾದರು. 

ಸಮೀಪದ ಕೊಮ್ಮೆತೋಡು ಗ್ರಾಮದ ನಿವಾಸಿಯೂ ಆದ ಉದ್ದಪಂಡ ಪೂಣಚ್ಚ, ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. 

ಮೃತರಿಗೆ ಪತ್ನಿ ಹಾಗೂ ಪುತ್ರಿ ಹರ್ಷಿಕಾ ಪೂಣಚ್ಚ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಸಮೀಪದ ಕಾರ್ಮಾಡು ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿತು. ಚಿತ್ರ ನಟ ಭುವನ್ ಮತ್ತಿತರ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)