ಏರ್ ಷೋ ಲಖನೌಗೆ ಸ್ಥಳಾಂತರ ಆಗಲ್ಲ, ಅದಕ್ಕೆ ಅವಕಾಶ ಕೊಡಲ್ಲ: ಅನಂತಕುಮಾರ್

7

ಏರ್ ಷೋ ಲಖನೌಗೆ ಸ್ಥಳಾಂತರ ಆಗಲ್ಲ, ಅದಕ್ಕೆ ಅವಕಾಶ ಕೊಡಲ್ಲ: ಅನಂತಕುಮಾರ್

Published:
Updated:

ಚಾಮರಾಜನಗರ: ಏರ್ ಷೋ ಲಖನೌಗೆ ಸ್ಥಳಾಂತರ ಆಗುವುದಿಲ್ಲ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಏರ್‌ ಷೋ ನಡೆಸಲು ಲಖನೌನಲ್ಲಿ ಮೂಲ ಸೌಕರ್ಯ ಇಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷವೂ ಇದೇ ರೀತಿ ವದಂತಿ ಹಬ್ಬಿತ್ತು ಎಂದ ಅವರು, ಈ ಬಾರಿಯೂ ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಸ್ಥಳಾಂತರದ ಹಿಂದೆ ಚುನಾವಣೆ ರಾಜಕೀಯ: ಸಿ.ಎಂ
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರ್‌ ಷೋ ಅನ್ನು ಉತ್ತರಪ್ರದೇಶದ ಲಖನೌಗೆ ಸ್ಥಳಾಂತರಿಸಿರುವುದರ ಹಿಂದೆ ಚುನಾವಣೆಯ ರಾಜಕೀಯ ಇದೆ ಎಂದು ಭಾನುವಾರ ಹುಬ್ಬಳ್ಳಿಯಲ್ಲಿ ಟೀಕಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಈ ನಿರ್ಧಾರದ ಹಿಂದೆ, ಚುನಾವಣೆ ಉದ್ದೇಶವಲ್ಲದೆ ಬೇರೇನೂ ಇಲ್ಲ’ ಎಂದಿದ್ದರು.

ಒತ್ತಾಯ
ಈ ಬಗ್ಗೆ, ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನಲ್ಲೇ ಏರ್‌ ಷೋ ನಡೆಸುವಂತೆ ಒತ್ತಾಯಿಸಲಾಗುವುದು ಎಂದಿದ್ದರು.

ರಾಜ್ಯದ ಜನರಿಗೆ ಮಾಡಿದ ಅವಮಾನ: ಡಿಸಿಎಂ

‘ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಏರೋ ಇಂಡಿಯಾ ಪ್ರದರ್ಶನವನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿರುವುದು ನಿಜವೇ ಆದಲ್ಲಿ, ಅದು ರಾಜ್ಯದ ಜನರಿಗೆ ಅವರು ಮಾಡುವ ಅವಮಾನ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !