ಆ.2ರ ನಂತರ ಯಡಿಯೂರಪ್ಪಗೆ ಸಕಾಲ: ಮಠಾಧೀಶರ ಭವಿಷ್ಯ

7

ಆ.2ರ ನಂತರ ಯಡಿಯೂರಪ್ಪಗೆ ಸಕಾಲ: ಮಠಾಧೀಶರ ಭವಿಷ್ಯ

Published:
Updated:

ತುಮಕೂರು: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಬುಧವಾರ ನಡೆದ ನೂತನ ಶಿಲಾಮಠದ ಉದ್ಘಾಟನೆ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನದಲ್ಲಿ ನಾಡಿನ ವಿವಿಧ ಮಠಾಧೀಶರು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.

‘ಜನರು ಆಶೀರ್ವದಿಸಿದರೂ ದುರದೃಷ್ಟದಿಂದ ಅಧಿಕಾರ ಕೈ ತಪ್ಪಿತು. ಸದನದಲ್ಲಿ ಬಲ ಇಲ್ಲದ ಕಾರಣ ರಾಜೀನಾಮೆ ನೀಡಿದೆ. ಮಠಾಧೀಶರ ಕೃಪೆಯಿಂದ ಒಳ್ಳೆಯದಾಗಲಿ ಎಂದು ಬಯಸುತ್ತೇನೆ’ಎಂದು ನುಡಿದರು.

ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಠಗಳಿಗೆ ಕೊಡುಗೆ ನೀಡಿದರು. ಅವರ ಈ ಸೇವೆ ಈಗ ರಾಜಕೀಯವಾಗಿ ಕೈ ಹಿಡಿಯಲಿದೆ. ಅವರಿಗೆ ಒಳ್ಳೆಯ ದಿನಗಳು ಬರಲಿವೆ. ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಮಠಾಧೀಶರೆಲ್ಲಾ ಅನುಷ್ಠಾನ ಕೈಗೊಳ್ಳುತ್ತೇವೆ. ಅವರಿಗೆ ಆಗಸ್ಟ್ 2ರ ನಂತರ ಒಳ್ಳೆಯ ಕಾಲ ಕೂಡಿ ಬರಲಿದೆ’ ಎಂದು ಭವಿಷ್ಯ ನುಡಿದರು.   

ರಂಭಾಪುರಿ ಮಠದ ವೀರಸೋಮೇಶ್ವರ ಸ್ವಾಮೀಜಿ, ‘ಯಡಿಯೂರಪ್ಪ ಅವರಿಗೆ ಮತ್ತೆ ಕಾಲ ಬರಲಿದೆ. ಅವರಿಗೆ ಎಲ್ಲ ಮಠಾಧೀಶ ಆಶೀರ್ವಾದವಿದೆ. ದೈವ ಕೃಪೆಯಿಂದ ಅವರಿಗೆ ಶುಭ ಕಾಲ ಸಮೀಪಿಸುತ್ತದೆ. ಅವರು ಅಧಿಕಾರದಲ್ಲಿ ಇದ್ದಾಗ ಧಾರ್ಮಿಕವಾಗಿ ಸಲ್ಲಿಸಿದ ಸೇವೆ ಅವರ ಕೈ ಹಿಡಿಯಲಿದೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !