ಶನಿವಾರ, ಫೆಬ್ರವರಿ 27, 2021
19 °C
ತೀರ್ಥಹಳ್ಳಿ ಬಳಿ ರಸ್ತೆ ಜಲಾವೃತ

ಆಗುಂಬೆ ಘಾಟಿ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ತೀರ್ಥಹಳ್ಳಿ ಸಮೀಪದ ಶಿವರಾಜಪುರ ಬಳಿ ತುಂಗಾ ನದಿಯ ನೀರು ರಸ್ತೆಯನ್ನು ಆವರಿಸಿದ್ದು, ಆಗುಂಬೆ ಘಾಟಿಯ ಸಂಪರ್ಕ ಕಡಿತಗೊಂಡಿದೆ.

ಪರಿಣಾಮ ತೀರ್ಥಹಳ್ಳಿಯಿಂದ ಆಗುಂಬೆ ಘಾಟಿ ಮಾರ್ಗವಾಗಿ ಹೆಬ್ರಿ ಉಡುಪಿಗೆ ಬರುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನೀರಿನ ಹರಿವು ಕಡಿಮೆಯಾದ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ನಾಗರಾಜ್ ನಾಯಕ್‌ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಆಗುಂಬೆ ಘಾಟಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ತಿರುವಿನಲ್ಲೂ ತಡೆಗೋಡೆ ಕುಸಿದಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು