ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿಗಂತ್–ಐಂದ್ರಿತಾ ರೇ

7

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿಗಂತ್–ಐಂದ್ರಿತಾ ರೇ

Published:
Updated:

ಚಿಕ್ಕಬಳ್ಳಾಪುರ: ಸ್ಯಾಂಡಲ್‌ವುಡ್‌ ತಾರಾ ಜೋಡಿ ದಿಗಂತ್ ಮತ್ತು ಐಂದ್ರಿತಾ ರೇ ಅವರ ವಿವಾಹ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ರಾತ್ರಿ ನಡೆಯಿತು.

ಕುಟುಂಬದ ಸದಸ್ಯರು, ಆಪ್ತರು ಮತ್ತು ಸ್ನೇಹಿತರಿಗಷ್ಟೇ ಆಹ್ವಾನವಿರುವ ಈ ಮದುವೆ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿದೆ. ಮಂಗಳವಾರ ರೆಸಾರ್ಟ್‌ನಲ್ಲಿ ‘ಅರಿಶಿನ’ ಶಾಸ್ತ್ರ ನೆರವೇರಿತ್ತು. ಆಹ್ವಾನಿತರಿಗಷ್ಟೇ ರೆಸಾರ್ಟ್ ಪ್ರವೇಶಕ್ಕೆ ಅನುಮತಿಸಲಾಗುತ್ತಿದ್ದು, ಸಂಪೂರ್ಣ ಖಾಸಗಿತನ ಕಾಪಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಬದುಕು ಬದಲಿಸಿತು ಐಂದ್ರಿತಾ ಸ್ನೇಹ: ದಿಗಂತ್‌

ಈ ಜೋಡಿ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್‌ವೊಂದರಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ.

ಇದನ್ನೂ ಓದಿ: ಅರಶಿನ ಶಾಸ್ತ್ರದ ಸಂಭ್ರಮದಲ್ಲಿ ಐಂದ್ರಿತಾ ದಿಗಂತ್

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !