ವಾಯುಗುಣಮಟ್ಟ ಮಾಪಕ ಕೇಂದ್ರಗಳ ಸ್ಥಾಪನೆ

ಬುಧವಾರ, ಮಾರ್ಚ್ 20, 2019
25 °C

ವಾಯುಗುಣಮಟ್ಟ ಮಾಪಕ ಕೇಂದ್ರಗಳ ಸ್ಥಾಪನೆ

Published:
Updated:

ಬೆಂಗಳೂರು: ವಾಯುಮಾಲಿನ್ಯ ಪ್ರಮಾಣ ತಪಾಸಣೆಗಾಗಿ ರಾಜ್ಯದ 22 ಜಿಲ್ಲೆಗಳಲ್ಲಿ ಒಟ್ಟು 32 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಪ್ರತಿ ಕೇಂದ್ರದ ಸ್ಥಾಪನೆಗೆ ₹2.3 ಕೋಟಿ ವೆಚ್ಚವಾಗಲಿದೆ. ಎಲ್ಲ ಕೇಂದ್ರಗಳ ಸ್ಥಾಪನೆಗೆ ₹73.6 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ವೆಚ್ಚವನ್ನು ಬಳ್ಳಾರಿ, ಕಲಬುರ್ಗಿ, ಚಿತ್ರದುರ್ಗ, ಬಾಗಲಕೋಟೆ, ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ₹ 25.3 ಕೋಟಿ ವೆಚ್ಚದಲ್ಲಿ ಒಟ್ಟು 11 ಕೇಂದ್ರಗಳನ್ನು ಸ್ಥಾಪಿಸಬೇಕು. ಉಳಿದ 17 ಜಿಲ್ಲೆಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲದಿಂದ ₹ 48.3 ಕೋಟಿ ವೆಚ್ಚದಲ್ಲಿ ಸ್ಥಾಪಿಸಬೇಕು. ಎಲ್ಲ ಕೇಂದ್ರಗಳನ್ನು ಒಂದು ವರ್ಷದ ಒಳಗೆ ಸ್ಥಾಪಿಸಬೇಕು ಎಂದು ಅರಣ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರಗಳ ವಿವರ: ಬೆಂಗಳೂರು ನಗರ, ಆನೇಕಲ್‌ (4), ನೆಲಮಂಗಲ (1), ರಾಮನಗರದ ಹಾರೋಹಳ್ಳಿ (1), ಮೈಸೂರು, ನಂಜನಗೂಡು (2), ಹುಬ್ಬಳ್ಳಿ (1), ದಾವಣಗೆರೆ (1), ಬೆಳಗಾವಿಯ ಗೋಕಾಕ್‌ (1), ತುಮಕೂರು (1), ಬಳ್ಳಾರಿ, ಹೊಸಪೇಟೆ, ಸಂಡೂರು, ಹರಪನಹಳ್ಳಿ (4), ಕಲಬುರ್ಗಿ, ಸೇಡಂ, ವಾಡಿ (3), ವಿಜಯಪುರ (1), ಭದ್ರಾವತಿ (1), ಮಂಗಳೂರು (1), ಚಿತ್ರದುರ್ಗ, ಹಿರಿಯೂರು (2), ಮಂಡ್ಯ (1), ಯಾದಗಿರಿ (1), ಗುಂಡ್ಲುಪೇಟೆ (1), ರಾಯಚೂರು (1), ಚನ್ನರಾಯಪಟ್ಟಣ (1), ದಾಂಡೇಲಿ (1), ಕೊಪ್ಪಳ (1)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !