ಸೋಮವಾರ, ಡಿಸೆಂಬರ್ 16, 2019
17 °C

‘ನಾನು ಮದುವೆ ಸರಕಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸೆಕ್ಷನ್‌ 375’ ಸಿನಿಮಾದಲ್ಲಿ ಅಕ್ಷಯ್‌ ಖನ್ನಾ ಅಭಿನಯಕ್ಕೆ ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ‘ಅಕ್ಷಯ್‌ ಇನ್ನೂ ಮದುವೆಯಾಗಿಲ್ಲ ಏಕೆ’ ಎಂಬ ಪ್ರಶ್ನೆಯನ್ನು  ಅಭಿಮಾನಿಗಳು ಕೇಳಿದ್ದಾರೆ.

‘ಒಂದು ಸಿನಿಮಾ ಯಶಸ್ವಿಯಾದ ಬಳಿಕ ಆ ಚಿತ್ರದ ನಾಯಕ, ಮತ್ತು ನಾಯಕಿಯ ಸುತ್ತ ಹತ್ತಾರು ಕತೆಗಳನ್ನು ಹೆಣೆಯಲಾಗುತ್ತದೆ. ಆದರೆ ನಾನು ಮದುವೆಯ ಸರಕು ಅಲ್ಲ. ನನಗೆ ಮದುವೆಯಾಗುವ ಉದ್ದೇಶವೂ ಇಲ್ಲ’ ಎಂದು ನಟ ಅಕ್ಷಯ್‌ ಖನ್ನಾ ಇತ್ತೀಚಿನ ಸಂದರ್ಶನವೊಂದರಲ್ಲಿ ನೇರವಾಗಿ ಹೇಳಿದ್ದಾರೆ.

‘ಸೆಕ್ಷನ್‌ 375’ ಸಿನಿಮಾದಲ್ಲಿ ಅಕ್ಷಯ್‌ ಖನ್ನಾ ಪ್ರಬುದ್ಧವಾಗಿ ಅಭಿನಯಿಸಿದ್ದಾರೆ. ಆದರೆ ಅವರು ಮದುವೆಯಾಗಬೇಕು‘ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು.

‘ನನ್ನ ನಟನೆಗೂ ಮದುವೆಗೂ ಏನು ಸಂಬಂಧ?’ ಎಂದು ಪ್ರಶ್ನಿಸಿರುವ ಅಕ್ಷಯ್‌, ನಾನು ಜೀವನದಲ್ಲಿ ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಮದುವೆಯಾದರೆ ನಮ್ಮ ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ. ನಮ್ಮ ಜೀವನದ ಮೇಲೆ ನಮಗೇ ನಿಯಂತ್ರಣ ಇರುವುದಿಲ್ಲ’ ಎಂದು ಅಕ್ಷಯ್‌, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

‘ಮದುವೆಯಾದರೆ ಪತ್ನಿಯ ಕಡೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳಾದ ಮೇಲೆ ಅವರ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಮದುವೆಯಾಗಬಾರದು ಎಂದು ಮೊದಲೇ ನಿರ್ಧರಿಸಿದ್ದೆ. ಮುಂದೆ ಕೂಡ ಮದುವೆಯಾಗುವ ಯಾವುದೇ ಯೋಚನೆ ಇಲ್ಲ’ ಎಂದು ಹೇಳುವ ಮೂಲಕ ಅಕ್ಷಯ್‌ ಖನ್ನಾ ತಮ್ಮ ಮದುವೆಯ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.

‘ಸೆಕ್ಷನ್‌ 375’ ಸಿನಿಮಾದಲ್ಲಿ ಅವರು ರೀಚಾ ಚಡ್ಡಾ ಜೊತೆ ನಟಿಸಿದ್ದಾರೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದಲೂ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು