ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.1 ರಿಂದ ಎಲ್ಲ ಕಡತಗಳೂ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು: ಕುಮಾರಸ್ವಾಮಿ

Last Updated 22 ಅಕ್ಟೋಬರ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ನವೆಂಬರ್‌ 1 ರಿಂದ ಎಲ್ಲ ಇಲಾಖೆಗಳ ಕಡತಗಳೂ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಇಲ್ಲವಾದರೆ ಸಹಿ ಹಾಕುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಳೆದ ಒಂದು ತಿಂಗಳಿಂದ ಬಾಕಿ ಉಳಿದಿದ್ದ ಎಲ್ಲ ಕಡತಗಳು ಮತ್ತು ಸಂಪುಟ ನಿರ್ಣಯಗಳಿಗೆ ಸಹಿ ಹಾಕಿ ವಿಲೇವಾರಿ ಮಾಡಿದರು. ಈ ಸಂದರ್ಭದಲ್ಲಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಜತೆ ಮಾತನಾಡಿ, ಕನ್ನಡದಲ್ಲಿ ಕಡತ ತಯಾರಿಸಲು ಗೊತ್ತಿಲ್ಲದ ಅಧಿಕಾರಿಗಳೂ ಅಷ್ಟರೊಳಗೆ ಕಲಿತುಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದರು.

ಎಲ್ಲ ಇಲಾಖೆಗಳ ಕಡತಗಳನ್ನು ಕನ್ನಡದಲ್ಲೇ ತಯಾರಿಸಬೇಕು ಎಂಬ ಆದೇಶ ಇದ್ದರೂ ಕೆಲವು ಅಧಿಕಾರಿಗಳು ಅದನ್ನು ಪಾಲಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT