ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಣ ಸ್ವರೂಪದ ಸರ್ಕಾರ: ಸ್ವಾಮೀಜಿ ಆಕ್ಷೇಪ

ಮಲ್ಪೆ ಕಡಲ ಕಿನಾರೆ: ಶ್ರೀ ರಾಮೋತ್ಸವ– ವಿಶ್ವವಲ್ಲಭ ತೀರ್ಥ ಸ್ವಾಮೀಜಿ
Last Updated 26 ಮಾರ್ಚ್ 2018, 6:22 IST
ಅಕ್ಷರ ಗಾತ್ರ

ಉಡುಪಿ: ಆಧುನಿಕ ಮಂಥರೆಯರು ರಾಮನನ್ನು ಈ ದೇಶದಿಂದಲೇ ಓಡಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆರೋಪಿದ್ದಾರೆ.

ಉಡುಪಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ, ದುರ್ಗಾ ವಾಹಿನಿ ಹಾಗೂ ಶ್ರೀರಾಮೋತ್ಸವ ಸಮಿತಿಗಳ ಸಹಯೋಗದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಒಬ್ಬ ರಾವಣ, ಒಬ್ಬಳು ಮಂಥರೆ ಯರಿದ್ದರೆ, ಇವತ್ತು ಅನೇಕ ರಾವಣರು ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಅವರಲ್ಲಿರುವ ತಂತ್ರ ಬಲಕ್ಕೆ ಪ್ರತಿತಂತ್ರವಾಗಿ ನಮ್ಮಲ್ಲಿರುವ ಮಂತ್ರ ಬಲದಿಂದ ರಾಮ ಮಂದಿರ ನಿರ್ಮಾಣದ ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

ಉತ್ತರಕಾಶಿ ಕಪಿಲಾಶ್ರಮ ರಾಮ ಚಂದ್ರ ಸ್ವಾಮೀಜಿ ಮಾತನಾಡಿ, ‘ರಾಜ್ಯ ದಲ್ಲಿ ತನ್ನ ಸ್ವಾರ್ಥ ರಾಜಕೀ ಯಕ್ಕೆ ಧರ್ಮ ಒಡೆದು ಆಳ್ವಿಕೆ ಮಾಡು ತ್ತಿರುವ ರಾವಣನ ಇನ್ನೊಂದು ಅವತಾರ ಸಿಎಂ ಸಿದ್ದರಾಮಯ್ಯ. ನೀತಿ, ಧರ್ಮ ಇಲ್ಲದಂತಾಗಿದೆ. ಶಿವನ ಆರಾಧಕರನ್ನು ಒಡೆದು ಆಳುವ ಮನ:ಸ್ಥಿತಿ ಹೊಂದಿದ್ದಾರೆ. ರಾಮನ ಹೆಸರಿಟ್ಟುಕೊಂಡು ಆಳ್ವಿಕೆ ನಡೆಸುತ್ತಿರುವ ರಾವಣ ಬುದ್ಧಿಯ ಸಿದ್ದನ ಸರ್ಕಾರ ಕಿತ್ತು ಹಾಕಬೇಕು. ಆ ದಿನ ಬಹಳ ದೂರವಿಲ್ಲ, ಹಿಂದೂಗಳು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ವಿಎಚ್‌ಪಿ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್, ರಘುನಾಥ ಸೋಮಯಾಜಿ, ಶರಣ್ ಪಂಪ್‌ವೆಲ್, ಸುನೀಲ್ ಕೆ.ಆರ್. ಆನಂದ ಸುವರ್ಣ ಮಲ್ಪೆ, ಡಾ.ವಿಜಯೇಂದ್ರ, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲಿಯಾನ್ ಇದ್ದರು.

ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ದಿನೇಶ್ ಮೆಂಡನ್ ಸ್ವಾಗತಿಸಿದರು. ಭಾಗ್ಯಶ್ರೀ ಐತಾಳ್ ರೂಪಿಸಿದರು. ಏಳೂರು ಮೊಗವೀರ ಸಭಾಭ ವನದಿಂದ ಮಲ್ಪೆ ಕಡಲ ತೀರದವರೆಗೆ ಶೋಭಾಯಾತ್ರೆ ನಡೆಯಿತು. ಕಲಾವಿದರಿಂದ ನೃತ್ಯ ವೈಭವ, ರಾವಣ ದಹನ, ಸುಡುಮದ್ದು ಪ್ರದರ್ಶನ ನಡೆಯಿತು.

**

ಹಿಂದೂ ಧರ್ಮವನ್ನು ಒಡೆದು ಇಬ್ಭಾಗ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೇ ಅನ್ಯ ಧರ್ಮವನ್ನು ಒಡೆದು ತೋರಿಸಲಿ.
–ರಾಮಚಂದ್ರ ಸ್ವಾಮೀಜಿ, ಉತ್ತರಕಾಶಿ ಕಪಿಲಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT