ಶನಿವಾರ, ಸೆಪ್ಟೆಂಬರ್ 21, 2019
21 °C

ಮೈಸೂರು, ಕನಕಪುರದ ಕಡೆ ಹೋಗುವವರು ಬದಲಿ ಮಾರ್ಗ ಬಳಸಿ: ಪೊಲೀಸರ ಮನವಿ

Published:
Updated:

ರಾಮನಗರ: ಜಿಲ್ಲೆಯಾದ್ಯಂತ ಗುರುವಾರ ಪ್ರತಿಭಟನೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಬೆಂಗಳೂರು-ಕನಕಪುರ ಹೆದ್ದಾರಿಯಲ್ಲಿ ಪ್ರಯಾಣ ಕೈಗೊಳ್ಳದಂತೆ ರಾಮನಗರ ಪೊಲೀಸರು ಮನವಿ‌ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸರು ಈ ಎರಡೂ‌ ಮಾರ್ಗಗಳನ್ನು ಬಿಟ್ಟು ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ಕೋರಿದ್ದಾರೆ.

ಕನಕಪುರದಲ್ಲಿ ಐಪಿಎಸ್ ಪಡೆ: ಕನಕಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿದೆ.

ಈ ಹಿಂದೆ ರಾಮನಗರ ಎಸ್ಪಿ ಆಗಿ ಕಾರ್ಯ ‌ನಿರ್ವಹಿಸಿದ್ದ ಅನುಪಮ್ ಅಗರ್ ವಾಲ್ ಅವರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಇವರೊಟ್ಟಿಗೆ ಚಿಕ್ಕಬಳ್ಳಾಪುರ ಎಸ್ಪಿ ಸಂತೋಷ್ ಬಾಬು, ಮತ್ತೊಬ್ಬ ಐಪಿಎಸ್ ಅಧಿಕಾರಿ ಅಭಿನವ್ ಖರೆ ಅವರನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

Post Comments (+)