ಭಾರತಿ ವಿಷ್ಣುವರ್ಧನ್ ಸಹಿತ 12 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

7

ಭಾರತಿ ವಿಷ್ಣುವರ್ಧನ್ ಸಹಿತ 12 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Published:
Updated:

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನುಡಿಸಿರಿ ಸಮ್ಮೇಳನದ ಸಂದರ್ಭ ನೀಡುವ ಆಳ್ವಾಸ್ ನುಡಿಸಿರಿ 2018ರ ಪ್ರಶಸ್ತಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಸಹಿತ 12 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

ಹೊರನಾಡು ಮುಂಬೈ ಕನ್ನಡ ಸಾಹಿತಿ ಡಾ.ಜಿ.ಡಿ.ಜೋಶಿ, ಇತಿಹಾಸ ತಜ್ಞ ಮೈಸೂರಿನ ಡಾ.ಎ.ವಿ.ನರಸಿಂಹಮೂರ್ತಿ, ರಂಗಭೂಮಿಯ ಹಿರಿಯ ನಟಿ ಡಾ.ಅರುಂಧತಿ ನಾಗ್, ಸಾಹಿತ್ಯ, ನಾಟಕ ರಂಗದಲ್ಲಿ ಹೆಸರು ಪಡೆದ ಕಲಬುರ್ಗಿಯ ಎಲ್.ಬಂದೇನವಾಜ ಖಲೀಫ್ ಆಲ್ದಾಳ, ಕಾಸರಗೋಡಿನ ಕವಿ ಡಾ.ಕೆ.ರಮಾನಂದ ಬನಾರಿ, ವಿದ್ವಾಂಸ ಬೆಂಗಳೂರಿನ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಹಿತಿ ಮಂಗಳೂರಿನ ಪ್ರೊ.ಎ. ವಿ. ನಾವಡ, ಬೆಂಗಳೂರಿನ ಫಾದರ್ ಪ್ರಶಾಂತ್ ಮಾಡ್ತ, ಗಾಯಕ ಶಿವಮೊಗ್ಗದ ಹೊ.ನಾ.ರಾಘವೇಂದ್ರ, ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹಾಗೂ ಅನಿವಾಸಿ ಕನ್ನಡಿಗ ಡಾ. ಮೈಸೂರು ನಟರಾಜ, ವಾಷಿಂಗ್ಟನ್ ಪ್ರಶಸ್ತಿಗೆ ಆಯ್ಕೆಯಾದ ಇತರರು.

ಪ್ರಶಸ್ತಿಯು ತಲಾ ₹25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಇದೇ 18ರಂದು ಸಂಜೆ 4ಕ್ಕೆ ನಡೆಯುವ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !