ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಿ’

ವಿಶ್ವಪರಿಸರ ದಿನಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಸುಶೀಲಾ ಮನವಿ
Last Updated 6 ಜೂನ್ 2018, 6:52 IST
ಅಕ್ಷರ ಗಾತ್ರ

ಸೇಡಂ: ‘ನಾವು ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿ ನಮ್ಮ ಸುಂದರ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸ ಬೇಕು’ ಎಂದು ಉಪ ವಿಭಾಗಾಧಿಕಾರಿ ಬಿ.ಸುಶೀಲಾ ಮನವಿ ಮಂಗಳವಾರ ಇಲ್ಲಿ ಮಾಡಿದರು.

ಪಟ್ಟಣದಲ್ಲಿ ವಿಶ್ವಪರಿಸರ ದಿನಾ ಚರಣೆಯ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಪ್ಲಾಸ್ಟಿಕ್ ನೀಡುವುದನ್ನು ನಿ‍ಷೇಧಿಸಬೇಕು. ಜನರು ಸಹ ಮಾರು ಕಟ್ಟೆಗೆ ಮನೆಯಿಂದ ಕೈಚೀಲ ತೆಗೆದುಕೊಂಡು ಹೋಡಗಬೇಕು’ ಎಂದರು.

ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಮಾತನಾಡಿ, ‘ಕಳಪೆ ಪ್ಲಾಸ್ಟಿಕ್ ಬಳಸುವುದು ಕಾನೂನು ಪ್ರಕಾರ ಅಪರಾಧ ವಾಗಿದೆ.  ಕಾನೂನು ಮೀರಿ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದರು.

ಪರಿಸರ ಸಂರಕ್ಷಣೆ ಕುರಿತು ಪಟ್ಟಣದ ಕೊತ್ತಲ ಬಸ ವೇಶ್ವರ ದೇವಾಲಯ ದಿಂದ ಚೌರಸ್ತಾ, ರೈಲು ನಿಲ್ದಾಣ, ಮುಖ್ಯರಸ್ತೆ ಮಾರ್ಗವಾಗಿ ಬಸ್‌ ನಿಲ್ದಾಣದವರೆಗೆ  ಜಾಗೃತಿ ಜಾಥಾ ನಡೆಯಿತು. ಅಧಿಕಾರಿಗಳು, ಮಹಿಳಾ ಸಿಬ್ಬಂದಿ ಪರಿಸರ ಸಂರಕ್ಷಣೆಯ ಘೋಷಣೆ ಕೂಗಿದರು.

ತಹಶೀಲ್ದಾರ್ ಕೀರ್ತಿ ಚಾಲಕ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾ ಹಕ ಅಧಿಕಾರಿ ಬಾಬು ರಾಠೋಡ, ಪುರಸಭೆ
ಕಂದಾಯ ಅಧಿಕಾರಿ ಸವಿತಾ ಇದ್ದರು.

ಪ್ಲಾಸ್ಟಿಕ್ ವಶ. ₹ 6600 ದಂಡ

ಸೇಡಂ: ವಿಶ್ವಪರಿಸರ ದಿನಾಚರಣೆಯ ನಿಮಿತ್ತ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 60 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ₹ 6600 ದಂಡ ವಿಧಿಸಿದ್ದಾರೆ.

ಪಟ್ಟಣದ ತ್ರಿವೇಣಿ ಲಾಡ್ಜ ಬಳಿಯಿಂದ ಚೌರಸ್ತಾ ವರೆಗೆ ರಸ್ತೆಯ ಎರಡು ಬದಿಯ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದ್ದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಎಚ್ಚರಿಕೆ ನಿಡಿದರು.

ಕಂದಾಯ ನಿರೀಕ್ಷಕಿ ಸಾವಿತ್ರಿ, ಪರಿಸರ ಅಭಿಯಂತರ ಪ್ರೀಯಾಂಕಾ ವಿಭೂತಿ, ಗ್ವಾಲೇಶ ಹೊನ್ನಳ್ಳಿ, ಎಸ್‌ಐ ಮೈನೋದ್ದಿನ್, ರಾಜು ರನ್ನೆಟ್ಲಾ, ಗುರುರಾಜ ಜೋಶಿ, ಜಯರಾವ ಕುಲಕರ್ಣಿ ಇದ್ದರು.

**
ನಾವು ಬಳಸುವ ಸಾಮಗ್ರಿಗಳು ರಾಸಾಯನಿಕ ಪದಾರ್ಥಗಳಿಂದ ತಯಾರಿಸಲ್ಪಿಟ್ಟಿರುತ್ತವೆ. ಸಾರ್ವಜನಿಕರು ಕೈಮಗ್ಗ ತಯಾರಿಕಾ ವಸ್ತುಗಳನ್ನು ಬಳಸಬೇಕು
ಬಿ.ಸುಶೀಲಾ, ಉಪವಿಭಾಗಾಧಿಕಾರಿ ಸೇಡಂ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT