ಮಂಗಳವಾರ, ನವೆಂಬರ್ 19, 2019
23 °C

ಅಂಬರೀಷ್ ಅಣ್ಣ ಆನಂದ್‌ಕುಮಾರ್‌ ನಿಧನ

Published:
Updated:
Prajavani

ಮೈಸೂರು: ಪಿಟೀಲು ಚೌಡಯ್ಯ ಅವರ ಮೊಮ್ಮಗ, ನಟ ಅಂಬರೀಷ್ ಅವರ ಅಣ್ಣ ಎಂ.ಎಚ್.ಆನಂದ್‌ಕುಮಾರ್ (76 ವರ್ಷ) ಶನಿ ವಾರ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.

ತೀವ್ರ ಎದೆನೋವಿನಿಂದ ಬಳಲಿದ್ದ ಅವರನ್ನು ಶುಕ್ರವಾರ ರಾತ್ರಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಾಮರಾಜಪುರಂನಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಹಿರಿಯ ಮಗ ಭಾನುವಾರ ಮಧ್ಯಾಹ್ನ ಮೈಸೂರಿಗೆ ಬರಲಿದ್ದು, ಸೋಮವಾರ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಆಟೊಮೊಬೈಲ್‌ ಎಂಜಿನಿಯರ್ ಆಗಿದ್ದ ಆನಂದ್‌ಕುಮಾರ್‌ ಅವರು ಸ್ವಂತ ಗ್ಯಾರೇಜ್‌ ಇಟ್ಟುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಅದನ್ನು ಮುಚ್ಚಿದ್ದರು. ಚಾಮರಾಜಪುರಂನಲ್ಲಿರುವ ಪಿಟೀಲು ಚೌಡಯ್ಯ ಅವರ ಮನೆಯಲ್ಲಿ ವಾಸವಾಗಿದ್ದರು.

ಪ್ರತಿಕ್ರಿಯಿಸಿ (+)