ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಏಕತೆ ಯಾರೊಬ್ಬರ ಸ್ವತ್ತಲ್ಲ: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಹತ್ತಿಗುಡೂರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ, ಸಂವಿಧಾನ ಗೌರವಿಸಿ– ಖರ್ಗೆ
Last Updated 2 ಮಾರ್ಚ್ 2020, 9:13 IST
ಅಕ್ಷರ ಗಾತ್ರ

ಶಹಾಪುರ: ‘ಸಂವಿಧಾನವು ಪ್ರತಿಯೊಬ್ಬರಿಗೂ ಉತ್ತಮ ಅವಕಾಶಗಳನ್ನು ನೀಡಿದೆ. ಸಂವಿಧಾನವನ್ನು ಮುನ್ನಡೆಸುವ ಜನಪ್ರತಿನಿಧಿಗಳು ಸರಿಯಾಗಿದ್ದರೆ, ದೇಶ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ. ದೇಶಭಕ್ತಿ ಹಾಗೂ ದೇಶದ ಏಕತೆ ಯಾರೊಬ್ಬರ ಸ್ವತ್ತೂ ಅಲ್ಲ. ದೇಶದ ಪ್ರತಿ ಪ್ರಜೆಯೂ ದೇಶಭಕ್ತರೇ ಎಂಬುದನ್ನು ಮರೆಯಬಾರದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಖರ್ಗೆ ಭಾನುವಾರ ಇಲ್ಲಿ ಹೇಳಿದರು

ತಾಲ್ಲೂಕಿ ಹತ್ತಿಗುಡೂರ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ, ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದ ಅವರು, ‘ಡಾ.ಬಾಬಾಸಾಹೇಬರ ಆಶಯದಿಂದ ಎಲ್ಲರಿಗೂ ಅಧಿಕಾರ ಸಿಕ್ಕಿದೆ ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಸರ್ವರಿಗೂ ಸಮಪಾಲು ಕಲ್ಪಿಸುವ, ಸರ್ವರಿಗೂ ನ್ಯಾಯ ದೊರಕಿಸಿಕೊಡುವ, ದೇಶದ 130 ಕೋಟಿ ಜನತೆಯ ಶ್ರೇಯೋಭಿವೃದ್ಧಿ ಬಯಸುವ ವ್ಯವಸ್ಥೆ ಸಂವಿಧಾನದಲ್ಲಿ ಅಡಕವಾಗಿದೆ. ಸಂವಿಧಾನದ ಆಶಯದಂತೆ ನಾವೆಲ್ಲರೂ ಸಾಗಬೇಕು’ ಎಂದು ಅವರು ತಿಳಿಸಿದರು.

‘ಭಗವದ್ಗೀತೆ, ವಚನಗಳು, ಖುರಾನ್, ಗುರು ಗ್ರಂಥ, ಬೈಬಲ್ ಆಯಾ ಸಮುದಾಯಗಳಿಗೆ ಮುಖ್ಯವಾಗಿವೆ. ಆದರೆ ಸಂವಿಧಾನ ಇಡೀ ದೇಶದ ಮನುಕುಲಕ್ಕೆ ಮಹತ್ವದ್ದಾಗಿದೆ. ಬಾಬಾ ಸಾಹೇಬರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ. ಇಂತಹ ಮಹಾನ್ ಮಾನವತಾವಾದಿಯ ಪುತ್ಥಳಿಯನ್ನು ಸರ್ವ ಸಮಾಜದವರು ಒಗ್ಗೂಡಿ ಅನಾವರಣ ನೆರವೇರಿಸಿರುವುದು ಹತ್ತಿಗುಡೂರ ಗ್ರಾಮಕ್ಕೆ ಹೆಮ್ಮೆ ತರುವ ಸಂಗತಿ. ಅಂಬೇಡ್ಕರ್ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ₹2000 ಕೋಟಿ ಅನುದಾನ ನೀಡುವಂತೆ ಈ ಭಾಗದ ಸಂಸದರು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ನಿಷ್ಕಾಳಜಿ ವಹಿಸಿದರೆ ಅನುದಾನ ಬೇರೆ ಬೇರೆ ಜಿಲ್ಲೆಗಳಿಗೆ ಸೀಮಿತವಾಗುತ್ತದೆ. ಇದರಿಂದ ಅಭಿವೃದ್ಧಿಗೆ ಹೊಡೆತ ಬೀಳುವುದು ಎಂದರು.

ಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, ‘ಡಾ.ಅಂಬೇಡ್ಕರ್‌ ಪುತ್ಥಳಿಗೆ ಹೈಮಾಸ್ಕ್ ವಿದ್ಯುತ್ ದೀಪ, ಗ್ರಾಮದಲ್ಲಿ ಸೋಲಾರ್‌ ವಿದ್ಯುತ್ ದೀಪ ವ್ಯವಸ್ಥೆ ಮಾಡಲು ಪ್ರಾಮಾಣಿಕವಾಗಿ ಯತ್ನಿಸುವೆ’ ಎಂದರು.

ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಶಾಸಕ ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ, ಡಾ.ಚಂದ್ರಶೇಖರ ಸುಬೇದಾರ, ಜ್ಞಾನ ಪ್ರಕಾಶ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ, ಗಿರಿಮಲ್ಲಯ್ಯ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಶರಣಪ್ಪ ಸಲಾದಪುರ, ಡಾ.ಅಂಬೇಡ್ಕರ ಪುತ್ಥಳಿ ಲೋಕಾರ್ಪಣೆ ಸಮಿತಿ ಸಂಚಾಲಕ ಸಿದ್ದಲಿಂಗರಡ್ಡಿ ಸಾವೂರ, ಚಂದ್ರಶೇಖರ ಆರಬೋಳ, ನಾಗಣ್ಣ ಪೂಜಾರಿ, ಗುರುನಾಥರಡ್ಡಿ ಹಳಿಸಗರ, ಮಲ್ಲಿಕಾರ್ಜುನ ಪೂಜಾರಿ,ನೀಲಕಂಠ ಬಡಿಗೇರ,ಮಾನಯ್ಯ ಪಂಚಮ್, ಭೀಮರಾಯ ಹೊಸ್ಮನಿ, ಬಸವಂತರಡ್ಡಿ ಸಾಹು, ಬಸಣ್ಣ ಭಂಗಿ, ಶರಣಪ್ಪ ಟಣಕೆದಾರ, ಶರಣರಡ್ಡಿ, ತಿಪ್ಪಣ್ಣ ಘಂಟಿ, ಮಲ್ಲಯ್ಯ ಹೊಸ್ಮನಿ, ನಾಗಲಿಂಗಪ್ಪ ನಾಟೇಕರ್,ರಾಘವೇಂದ್ರ ಕುಲಕರ್ಣಿ,ಶಿವರಾಜ ಕರಾಟೆ, ಅಯ್ಯಣ್ಣ ಮಹಾಮನಿ, ಸಯ್ಯದ ಖಾಲಿದ, ಶರಣು ಬಿರನೂರ, ಶೇಖಪ್ಪ ಹೊಸ್ಮನಿ, ಚಂದ್ರಶೇಖರ ನಾಟೇಕರ್ ತಾಯಪ್ಪ, ಶಿವಕುಮಾರ ತಳವಾರ, ಶ್ರೀಶೈಲ್ ಹೊಸ್ಮನಿ, ಘಾಳೆಪ್ಪ ಪೂಜಾರಿ, ಮರೆಪ್ಪ ನಾಟೇಕರ್, ಬಾಷುಮಿಯಾ
ವಡಗೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT