ಅನಂತಕುಮಾರ ಹೆಗಡೆ ಲೋಫರ್: ನನ್ನ ಹೇಳಿಕೆಗೆ ಪುನಃ ಸಮರ್ಥನೆ -ಆನಂದ ಅಸ್ನೋಟಿಕರ್

7
ಕೇಂದ್ರ ಸಚಿವರ ವಿರುದ್ಧ ಜೆಡಿಎಸ್ ಮುಖಂದ ಆನಂದ ಅಸ್ನೋಟಿಕರ್ ಮತ್ತೆ ವಾಗ್ದಾಳಿ

ಅನಂತಕುಮಾರ ಹೆಗಡೆ ಲೋಫರ್: ನನ್ನ ಹೇಳಿಕೆಗೆ ಪುನಃ ಸಮರ್ಥನೆ -ಆನಂದ ಅಸ್ನೋಟಿಕರ್

Published:
Updated:
Deccan Herald

ಕಾರವಾರ: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಾಲಾಯಕ್, ಲೋಫರ್ ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ. ಅದನ್ನು ನಾನು ಮತ್ತೆ ಸಮರ್ಥಿಸಿಕೊಳ್ಳುತ್ತಿದ್ದೇನೆ. ಅವರು ರಾಜಕೀಯಕ್ಕೆ ಸೇವೆ ಮಾಡಲು ಬಂದಿಲ್ಲ ಎನ್ನುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ವಾಗ್ದಾಳಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜಸೇವೆಯೇ ರಾಜಕೀಯದ ಬುನಾದಿ. ಅನಂತಕುಮಾರ ಸಮಾಜಸೇವೆ ಮಾಡಲು ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಜಗತ್ತಿಗೆ ಸುದ್ದಿ ತಲುಪಿಸುವ ಮಾಧ್ಯಮದವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಏನು ಬೇಕಾದರೂ ಬರೆಯುವುದು ಮಾಧ್ಯಮದವರ ಕೆಲಸಾನಾ? ಅನಂತಕುಮಾರ್ ಮಾಧ್ಯಮ ರಂಗಕ್ಕೆ ಅಪಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂಕೋಲಾದಲ್ಲಿ ಪಾಸ್‌ಪೋರ್ಟ್‌ ಸೇವಾಕೇಂದ್ರವನ್ನು ಆರಂಭಿಸುವುದಾಗಿ ಅವರು ನಿನ್ನೆ ಶಿರಸಿಯಲ್ಲಿ ಹೇಳಿದ್ದಾರೆ. ಅವರಿಗೆ ತಾಕತ್ತಿದ್ದರೆ ಐದು ತಿಂಗಳಲ್ಲಿ ಶಂಕುಸ್ಥಾಪನೆ ಮಾಡಲಿ ನೋಡೋಣ’ ಎಂದು ಸವಾಲೆಸೆದರು.

‘ಹಿಂದುಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದಾರೆ. ಆ ಯುವಕರ ಮೇಲಿರುವ ಪ್ರಕರಣಗಳ ಬಗ್ಗೆ ಅವರೀಗ ಮಾತನಾಡುತ್ತಿಲ್ಲ. ಅವರ ರಾಜಕಾರಣ ಪರೇಶ್ ಮೇಸ್ತನ ಸಾವಿನ ಮೇಲೆ ನಡೆಯುತ್ತಿದೆ. ಆ ಕೊಲೆಯ ತನಿಖೆ ಸಿಬಿಐನಿಂದ ಇನ್ನೂ ಆಗಿಲ್ಲ. ಲೋಕಸಭಾ ಚುನಾವಣೆಗೂ ಅವನ ಸಾವಿನ ವಿಚಾರವನ್ನೇ ಬಳಸಿಕೊಳ್ಳುತ್ತಾರೆ. ಅವರಿಗೆ ಈ ಬಾರಿ ಅವಕಾಶ ಕೊಡಬಾರದು. ಈ ಬಾರಿಯಾದರೂ ಎಲ್ಲರೂ ಒಟ್ಟಾಗಿ ಬುದ್ಧಿ ಕಲಿಸಬೇಕು. ಸಮಾಜಸೇವೆ ಮಾಡುವ ವ್ಯಕ್ತಿ ನಮಗೆ ಬೇಕು’ ಎಂದು ಪ್ರತಿಪಾದಿಸಿದರು.

‘ಸಂಸದರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಸಮಿತಿಯಿದೆ. ಐದು ವರ್ಷಗಳಲ್ಲಿ ಅವರು ಎಷ್ಟು ಸಭೆ, ಎಷ್ಟು ಸಮೀಕ್ಷೆ ಮಾಡಿದ್ದಾರೆ? ಅನಂತಕುಮಾರ ಹೆಗಡೆಯನ್ನು ರಾಜಕೀಯದಿಂದಲೇ ಹೊರ ಹಾಕಬೇಕು. ಈ ಸಾರಿ ಬದಲಾವಣೆ ತರಬೇಕು’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 24

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !