‘ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು?’

7

‘ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು?’

Published:
Updated:
Deccan Herald

ಶಿರಸಿ: ‘ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು? ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ವರ್ತಿಸುತ್ತಿರುವ ರೀತಿ ಹಿಂದೂಗಳಿಗೆ ನೋವುಂಟು ಮಾಡಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

‘ಐದು ಶತಮಾನಗಳಿಂದ ರಾಮ ಮಂದಿರಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಎಷ್ಟೋ ಭಕ್ತರಿಗೆ ಅನ್ಯಾಯವಾಗಿದೆ. ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸದಿದ್ದರೆ, ಸಮಾಜದಲ್ಲಿ ಉಂಟಾಗುವ ಕ್ಷೋಭೆ ತಣಿಸಲು ಸರ್ಕಾರಕ್ಕೆ ಅನ್ಯಮಾರ್ಗ ಶೋಧಿಸುವ ಅನಿವಾರ್ಯತೆ ಎದುರಾಗುತ್ತದೆ. ನಾವೀಗ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

**

ನ್ಯಾಯಾಲಯವೇ ರಾಮ ಮಂದಿರ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸದಿರುವುದು ಹಿಂದೂಗಳ ಹೋರಾಟಕ್ಕೆ ಅವಮಾನ ಮಾಡಿದಂತೆ.

–ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !