ಕೆಲವರಿಂದ ನನ್ನ ತೇಜೋವಧೆ: ಟ್ವಿಟರ್‌ನಲ್ಲಿ ಅನಂತಕುಮಾರ್‌ ಹೆಗಡೆ ಅಸಮಾಧಾನ

7

ಕೆಲವರಿಂದ ನನ್ನ ತೇಜೋವಧೆ: ಟ್ವಿಟರ್‌ನಲ್ಲಿ ಅನಂತಕುಮಾರ್‌ ಹೆಗಡೆ ಅಸಮಾಧಾನ

Published:
Updated:

ಬೆಂಗಳೂರು: ಕೆಲವರಿಂದ ತಮ್ಮ ತೇಜೋವಧೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ರಾಜ್ಯ ರಾಜಕಾರಣದಿಂದ ಹೆಗಡೆಯವರನ್ನ ದೂರ ಇಡಲಾಗುತ್ತಿದೆ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯ ಮಾಡುವವರು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ಪಕ್ಷದ ಸಭೆ ವೇಳೆ ಕೆಳಗೆ ಕುಳಿತಿದ್ದ ನನ್ನನ್ನ ವೇದಿಕೆಯ ಮೇಲೆ ಕೂರಿಸಿದವರೇ ಯಡಿಯೂರಪ್ಪ. ಆದರೆ, ಯಡಿಯೂರಪ್ಪ ಅವರೇ ನನ್ನನ್ನ ಅವಮಾನಿಸಿದರು ಎಂದು ಬಿಂಬಿಸಲಾಯಿತು.

ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದು ನಡೆದದ್ದರಿಂದ, ಇದರಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನೂ ಎಳೆದು ತರಲಾಯಿತು. ವಿಘ್ನ ಸಂತೋಷಿಗಳು ನನ್ನ ಹಾಗೂ ಯಡಿಯೂರಪ್ಪನವರ ಹೆಸರು ಹಾಳುಮಾಡುವ ಕೆಲಸ ಮಾಡಿದರು ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 4

  Amused
 • 2

  Sad
 • 0

  Frustrated
 • 6

  Angry

Comments:

0 comments

Write the first review for this !