ಜಯಮಾಲಾ ಕೊರಳಿಗೆ ಸಮಸ್ಯೆಗಳ ಸರಮಾಲೆ

7
ಸಚಿವರ ಮುಂದೆ ಅಳಲು, ಆಕ್ರೋಶ ತೋಡಿಕೊಂಡ ಅಂಗನವಾಡಿ ಕಾರ್ಯಕರ್ತೆಯರು

ಜಯಮಾಲಾ ಕೊರಳಿಗೆ ಸಮಸ್ಯೆಗಳ ಸರಮಾಲೆ

Published:
Updated:

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಅವರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಕ್ಕೂಟದ ಪದಾಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ, ತಾವು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಕಾರ್ಯಕರ್ತೆಯರು ತೆರೆದಿಟ್ಟರು. ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಸಭೆಯಲ್ಲಿದ್ದರು.

ಕೇವಲ ₹ 84ರಲ್ಲಿ ಶೌಚಾಲಯ, ಪಾತ್ರೆ, ಬಟ್ಟೆಯನ್ನು ತೊಳೆಯಲು ಸಾಬೂನು, ಪೊರಕೆ, ಸೀಮೆಸುಣ್ಣವನ್ನು ಕೊಂಡುಕೊಂಡು ಕಟ್ಟಡ ನಿರ್ವಹಣೆ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಯನ್ನೂ ಕಾರ್ಯಕರ್ತೆಯರು ಕೇಳಿದರು.

ಪ್ರಮುಖ ಬೇಡಿಕೆಗಳು: ರಾಜ್ಯದ ನಗರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಕ್ಕಾಗಿ ಕಟ್ಟಡವನ್ನು ಬಾಡಿಗೆ ಪಡೆಯಬೇಕಾದರೆ ಮುಂಗಡ ಹಣ ಕೊಡಬೇಕು. ಇದನ್ನು ಇಲ್ಲಿಯವರೆಗೂ ಸರ್ಕಾರದವರು ಕೊಟ್ಟಿಲ್ಲ. ಕೆಲವು ಕಡೆ ₹50ಸಾವಿರದಿಂದ ₹70 ಸಾವಿರದಷ್ಟು ಮುಂಗಡ ಹಣ ನೀಡಬೇಕಾಗಿದೆ. ಇದನ್ನು ಕಾರ್ಯಕರ್ತೆಯರು ಕೈಯಿಂದ ಹಾಕಬೇಕಿದೆ ಎಂಬ ಕಳವಳ ವ್ಯಕ್ತವಾಯಿತು.

ವಿಧವೆಯರ ಮಾಹಿತಿಯನ್ನು ಅಂಗನವಾಡಿಯ ಕಾರ್ಯಕರ್ತೆಯರೇ ಕೊಡುವಂತೆ ಕೆಲವರಿಗೆ ಸಂದೇಶ ಬಂದಿದೆ. ಇದನ್ನು ಮಾಡುವುದಿಲ್ಲ ಎಂದು ಕಾರ್ಯಕರ್ತೆಯರು ಹೇಳಿದರು.

ಇದಕ್ಕೆ ಉತ್ತರಿಸಿದ ಜಯಮಾಲಾ,  ‘ಕೆಲವು ಯೋಜನೆಗಳ ಭಾರ ಕಾರ್ಯಕರ್ತೆಯರ ಮೇಲಿರುವುದು ನಿಜ. ಮಿನಿ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿಯರ ನಿಯೋಜನೆ ಕುರಿತು ಚರ್ಚೆ ಮಾಡಲಾಗಿದೆ. ವಿಧವೆಯರ ಮಾಹಿತಿ ಕೊಡುವುದು ಅವರ ಕೆಲಸ ಅಲ್ಲ. ಇದನ್ನು ಅವರು ಕೊಡಬೇಕಿಲ್ಲ. ಉಳಿದ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಬಗೆಹರಿಸಲಿದ್ದೇವೆ’ ಎಂದು ಹೇಳಿದರು.

‘ಮಾತೃಪೂರ್ಣ ಅಭಾದಿತ’

ಮಾತೃಪೂರ್ಣ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುತ್ತೇವೆ. ಆದಷ್ಟು ಬೇಗ ಕಾರ್ಯಕರ್ತೆಯರ ಗೌರವಧನ ಸಿಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಮಾ ಮಹಾದೇವನ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !