ಮೈಸೂರು ಮೃಗಾಲಯದಲ್ಲಿ ವರ್ಷದಲ್ಲಿ 35 ಪ್ರಾಣಿ ಸಾವು

7
ಕಾಯಿಲೆ ಮತ್ತು ಹೊಡೆದಾಟ ಪ್ರಮುಖ ಕಾರಣ

ಮೈಸೂರು ಮೃಗಾಲಯದಲ್ಲಿ ವರ್ಷದಲ್ಲಿ 35 ಪ್ರಾಣಿ ಸಾವು

Published:
Updated:
ಚಾಮರಾಜೇಂದ್ರ ಮೃಗಾಲಯ

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕಳೆದ ಒಂದು ವರ್ಷದಲ್ಲಿ 35 ಪ್ರಾಣಿ– ಪಕ್ಷಿಗಳು ಮೃತಪಟ್ಟಿದ್ದು, ಈ ಪೈಕಿ ವಿವಿಧ ಕಾಯಿಲೆಗಳಿಂದ ಮೃತಪಟ್ಟ ಪ್ರಾಣಿಗಳ ಸಂಖ್ಯೆಯೇ ಅಧಿಕ.  ಒಟ್ಟು 20 ಪ್ರಾಣಿಗಳು ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಮೃಗಾಲಯದ 2017–18 ರ ವಾರ್ಷಿಕ ವರದಿ ತಿಳಿಸಿದೆ. 11 ಪ್ರಾಣಿಗಳು ಪರಸ್ಪರ ಹೊಡೆದಾಡಿಕೊಂಡು ಮತ್ತು 3 ಪ್ರಾಣಿಗಳು ವಯಸ್ಸಾಗಿ ಕೊನೆಯುಸಿರೆಳೆದಿವೆ. ಎರಡು ಚಿರತೆಗಳಲ್ಲಿ ಒಂದು ಖಿನ್ನತೆ ಮತ್ತು ಹಸಿವಿನಿಂದ ಕೊನೆಯುಸಿರೆಳೆದಿದ್ದರೆ, ಇನ್ನೊಂದು ಚಿರತೆಯ ರಕ್ತದ ನಂಜು ಏರುವಿಕೆ ಪರಿಣಾಮ (septicemia) ಸತ್ತಿದೆ. ಹೊಡೆದಾಟದಿಂದ ಸತ್ತ ಪ್ರಾಣಿಗಳಲ್ಲಿ ಜಿಂಕೆ, ಕೃಷ್ಣ ಮೃಗಗಳೇ ಹೆಚ್ಚು. ಅದರಲ್ಲೂ ಪರಸ್ಪರ ಸಂಘರ್ಷದಿಂದ ಆಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದವೇ ಹೆಚ್ಚು ಎಂದು ಅಂಕಿ–ಅಂಶ ತಿಳಿಸಿದೆ.

* * * *

ಪ್ರಾಣಿಗಳ ಜೀವ ತೆಗೆದ ಕಾಯಿಲೆಗಳು; ಸತ್ತ ಪ್ರಮುಖ ಪ್ರಾಣಿಗಳು

* ತೀವ್ರ ಸ್ವರೂಪದ ಕರುಳ ಉರಿಯೂತ– ನಾಲ್ಕು ಕೊಂಬಿನ ಜಿಂಕೆಗಳು

* ಹೃದಯ ವೈಫಲ್ಯ- ಜಿರಾಫೆ (ಕೃಷ್ಣರಾಜ),ಕಾಡುಕೋಣ (ತ್ರಿಭುವನ್‌),ಮೊಸಳೆ

* ನ್ಯುಮೋನಿಯಾ– ನೀಲಗಿರಿ ಲಂಗೂರ್‌, ಕಾಡುಕೋಣ(ಪ್ರೀತಮ್)

* ಬಹು ಅಂಗಾಂಗಗಳ ವೈಫಲ್ಯ–  ಕಾಡೆಮ್ಮೆ(ಅಮಲಾ), ಸಿಂಹ (ರಣಿತಾ)

* ಕ್ಷಯ– ಸ್ಲಾತ್‌ ಕರಡಿ (ಚಾಮುಂಡಿ)

* ಸೋಂಕು– ಅಲ್ಬಿನೊ ಕಾಳಿಂಗ

* ರಕ್ತದಲ್ಲಿ ನಂಜು ಏರುವಿಕೆ– ಸಿಂಹ

* ಉಸಿರಾಟದ ತೊಂದರೆ- ಬಿಳಿ ಗರಿಗಳನ್ನು ಹೊಂದಿದ ಗಿಳಿ

* * * *

ಕಾಯಿಲೆಗಳಿಂದ – 20

ಮುಪ್ಪು – 3

ಸಂಘರ್ಷದಿಂದ – 11

ಹಸಿವು/ ಖಿನ್ನತೆ – 1

ಒಟ್ಟು – 35

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !