ರಾಮನಗರ: 11ಕ್ಕೆ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

7
ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ

ರಾಮನಗರ: 11ಕ್ಕೆ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

Published:
Updated:

ರಾಮನಗರ: ಇಲ್ಲಿ ನಡೆಯಲಿರುವ ವಿಧಾನಸಭೆ ಉಪ‌‌ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಇದೇ 11ರಂದು ಬೆಳಿಗ್ಗೆ 10ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ‌ ರಾಜಶೇಖರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು‌.

‘ಅನಿತಾ ಅವರೇ ಅಭ್ಯರ್ಥಿ ಆಗಬೇಕು ಕಾರ್ಯಕರ್ತರ ಅಭಿಪ್ರಾಯ. ಇದೇ ಪಕ್ಷದ‌ ನಾಯಕರ ಅಭಿಪ್ರಾಯವೂ ಆಗಿದೆ’ ಎಂದರು.


ಅನಿತಾ ಕುಮಾರಸ್ವಾಮಿ

ಕಾರ್ಯಕರ್ತನಿಂದ ವಾಗ್ವಾದ: ಅನಿತಾ ಸ್ಪರ್ಧೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರೊಬ್ಬರು ಪತ್ರಿಕಾಗೋಷ್ಠಿಯಲ್ಲಿಯೇ ಮುಖಂಡರೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. 'ಅನಿತಾ ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುತ್ತೀರಿಲ್ಲ. ಎಂದಾದರೂ ನಮ್ಮ ಅಭಿಪ್ರಾಯ ಕೇಳಿದ್ದೀರಾ' ಎಂದು ಅಪ್ಪಾಜಿ ಗೌಡ ಎಂಬುವರು ಪ್ರಶ್ನಿಸಿದರು.

'ಅಭ್ಯರ್ಥಿ ಆಗಲು ಅವರೇನು ಸಾಧನೆ ಮಾಡಿದ್ದಾರೆ.‌ ಇಲ್ಲಿ ಬೇರೆ ಯಾರೂ ಇಲ್ಲವಾ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಮುಖಂಡರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !