ಮತ್ತೆ ಮುನ್ನೆಲೆಗೆ ಬಂದ ಅಂಜನಾದ್ರಿ ವಿವಾದ

7
ಪೂಜೆಯ ಹಕ್ಕು ಪಡೆದುಕೊಂಡ ವಿದ್ಯಾದಾಸ ಬಾಬಾ

ಮತ್ತೆ ಮುನ್ನೆಲೆಗೆ ಬಂದ ಅಂಜನಾದ್ರಿ ವಿವಾದ

Published:
Updated:
Prajavani

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲ ಪೂಜೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಹಿಂದೆ ಪದಚ್ಯುತಗೊಂಡಿದ್ದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರು ಮಂಗಳವಾರ ಮತ್ತೆ ಅಂಜನಾದ್ರಿ ಬೆಟ್ಟ ಹತ್ತಲು ಯತ್ನಿಸಿದರು.

ಇಬ್ಬರು ಸಹಚರರೊಂದಿಗೆ ಬಂದಿದ್ದ ವಿದ್ಯಾದಾಸ ಬಾಬಾ, 575 ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟ ಹತ್ತಲು ಯತ್ನಿಸಿದರು.

ಆದರೆ, ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ತೀವ್ರ ಅಸ್ವಸ್ಥತೆಯಿಂದ ಬಳಲಿ, ಬೆಟ್ಟ ಹತ್ತುವ ಯತ್ನವನ್ನು ಕೈಬಿಟ್ಟರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬಾ, ‘ಡಿ.26 ರಂದು ಬೆಟ್ಟ ಹತ್ತಿ ಆಂಜನೇಯನಿಗೆ ಪೂಜೆ ಸಲ್ಲಿಸುತ್ತೇನೆ. ಧಾರವಾಡ ಹೈಕೋರ್ಟ್ ಪೀಠವು ನನಗೆ ಪೂಜೆಯ ಹಕ್ಕು ದಯಪಾಲಿಸಿ ತೀರ್ಪು ನೀಡಿದೆ. ಪೊಲೀಸರಿಗೆ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ನೀಡಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿ ಅಂಜನಾದ್ರಿ ಪರ್ವತದಿಂದ ನನ್ನನ್ನು ಹೊರಹಾಕಿ ದೇಗುಲವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸಿದ್ದರು. ಇದನ್ನು ಸ್ವತಃ ನ್ಯಾಯಾಲಯವೇ ಅಸಿಂಧುಗೊಳಿಸಿದೆ' ಎಂದು ತಿಳಿಸಿದರು.

‘ದೇಗುಲದ ಆದಾಯದ ಮೇಲೆ ಕಣ್ಣಿಟ್ಟಿರುವ ಮತ್ತೊಂದು ತಂಡ ಗದ್ದಲ ಎಬ್ಬಿಸುವ ಸಾಧ್ಯತೆಯಿದ್ದು, ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ನ್ಯಾಯಾಲಯದ ತೀರ್ಪನ್ನು ಪೊಲೀಸರು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !