ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದಲ್ಲೇ ಅಕ್ಕಿ ಖರೀದಿ’

Last Updated 4 ನವೆಂಬರ್ 2018, 19:12 IST
ಅಕ್ಷರ ಗಾತ್ರ

ಅರಕಲಗೂಡು: ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸುವ ಕುರಿತು ಚಿಂತನೆ ನಡೆದಿದ್ದು, ಸದ್ಯದಲ್ಲೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಲ್ಲಿ ಭಾನುವಾರ ತಿಳಿಸಿದರು.

’ರಾಜ್ಯವು ವಿವಿಧೆಡೆಯಿಂದ ಕೆ.ಜಿಗೆ ₹ 26 ದರದಲ್ಲಿ ಅಕ್ಕಿ ಖರೀದಿಸುತ್ತಿದೆ. ಆದರೆ, ವ್ಯಾಪಾರಿಗಳು ರೈತರಿಂದ ಕೆ.ಜಿ ಅಕ್ಕಿಯನ್ನು ಕೇವಲ ₹18 ದರದಲ್ಲಿ ಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೆ.ಜಿಗೆ ₹22 ನೀಡಲು ಯೋಜನೆ ರೂಪಿಸುತ್ತಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದ್ದು, ಸರ್ಕಾರಕ್ಕೆ ಪ್ರತಿ ಕೆ.ಜಿಗೆ ₹ 4 ಉಳಿಯಲಿದೆ’ ಎಂದರು.

ಜಿಲ್ಲೆಯಲ್ಲಿ ಮುಸುಕಿನ ಜೋಳದ ಖರೀದಿ ಕೇಂದ್ರಗಳನ್ನು ಒಂದರೆಡು ದಿನಗಳಲ್ಲಿ ತೆರೆಯಲಾಗುವುದು. ಕ್ವಿಂಟಲ್‌ಗೆ ₹1,650 ಬೆಂಬಲ ಬೆಲೆ ನೀಡಲು ಚಿಂತನೆ ನಡೆದಿದೆ
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT