ಬನವಾಸಿ ತಾಲ್ಲೂಕಾಗಿ ಘೋಷಿಸಲಿ: ‍ಪಾಪು

7

ಬನವಾಸಿ ತಾಲ್ಲೂಕಾಗಿ ಘೋಷಿಸಲಿ: ‍ಪಾಪು

Published:
Updated:

ಬನವಾಸಿ (ಶಿರಸಿ): 'ರಾಜ್ಯ ಸರ್ಕಾರಕ್ಕೆ ಇತಿಹಾಸದ ಬಗ್ಗೆ ಗೌರವವಿದ್ದರೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು' ಎಂದು ಸಾಹಿತಿ ಪಾಟೀಲ ಪುಟ್ಟಪ್ಪ ಆಗ್ರಹಿಸಿದರು.

ಇಲ್ಲಿ ಶನಿವಾರ ಆಯೋಜಿಸಿದ್ದ ‘ಪಂಪ ಮಹಾಕವಿ ಸುತ್ತಮುತ್ತ’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ’ಪಂಪ ಎಲ್ಲಿ ಹುಟ್ಟಿದ್ದು ಎಂಬುದು ಮುಖ್ಯವಲ್ಲ. ಪಂಪನ ಮೂಲದ ಬಗೆಗಿನ ವಾದ ಅಪ್ರಸ್ತುತ. ಬನವಾಸಿ ಪ್ರದೇಶದಲ್ಲಿ ಆತನ ಸಾಹಿತ್ಯ ಏಳ್ಗೆಯಾಗಿದೆ ಎಂಬುದು ಸತ್ಯ ಸಂಗತಿ. ಬನವಾಸಿಯೇ ಪಂಪನ ನೆಲೆವೀಡು. ಪಂಪ ಪ್ರಶಸ್ತಿ ವಿತರಣೆಗೆ ಯೋಗ್ಯ ಸ್ಥಳ ಬನವಾಸಿ’ ಎಂದರು.
‘ಐತಿಹಾಸಿಕ ಮಹತ್ವವಿರುವ ಬನವಾಸಿ ಹಾಗೂ ರಾಷ್ಟ್ರಕೂಟರ ರಾಜಧಾನಿ ಮಾಳಖೇಡ ಈ ಎರಡೂ ಸ್ಥಳಗಳು ತಾಲ್ಲೂಕಾಗಬೇಕು. ಶತಾಯಗತಾಯ ಇದು ಆಗಲೇಬೇಕು. ನಾನು ಮೊದಲಿನಿಂದಲೂ ಇದನ್ನು ಪ್ರತಿಪಾದಿಸುತ್ತಾ ಬಂದಿದ್ದೇನೆ. ಕನ್ನಡಿಗರ ಭಾವನೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಗ್ರ ಕನ್ನಡ ನಾಡು ಬನವಾಸಿಯ ಹಿಂದಿದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !