ಮಂಡ್ಯಕ್ಕೆ ಬಂದು ಮತ ಹಾಕಿ: ರಮ್ಯಾಗೆ ಬಿಜೆಪಿ ಕಾರ್ಯಕರ್ತರ ವಿಡಿಯೊ ಮನವಿ

7

ಮಂಡ್ಯಕ್ಕೆ ಬಂದು ಮತ ಹಾಕಿ: ರಮ್ಯಾಗೆ ಬಿಜೆಪಿ ಕಾರ್ಯಕರ್ತರ ವಿಡಿಯೊ ಮನವಿ

Published:
Updated:

ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಶನಿವಾರ ನಡೆಯಲಿರುವ ಲೋಕಸಭೆ ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ಕ್ಷೇತ್ರಕ್ಕೆ ಬರಬೇಕು ಎಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಶಿವಕುಮಾರ್ ಆರಾಧ್ಯ, ಸಿ.ಟಿ.ಮಂಜುನಾಥ್ ಇತರರು ಈ ಕುರಿತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

'ರಮ್ಯಕ್ಕಾ ನಾವು ನಿಮ್ಮ ಬಾಡಿಗೆ ಸಹೋದರರು. ಶನಿವಾರ ಉಪ ಚುನಾವಣೆ ಇದೆ. ನೀವು ಬಂದು ಮತದಾನ ಮಾಡಬೇಕು. ನಿಮ್ಮ ಪಕ್ಷದಿಂದ ಅಭ್ಯರ್ಥಿ ಹಾಕಿಲ್ಲ. ನೀವು ನಮ್ಮ ಮನೆಮಗಳು, ನಿಮ್ಮ ಪಕ್ಷದವರು ನಿಮ್ಮ ಕಾಲು ಎಳೆಯುತ್ತಾರೆ. ಆದರೆ ನಾವು ಹಾಗಲ್ಲ. ನೀವು ಬಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು' ಎಂದು ಆಗ್ರಹಿಸಿದರು. 

ಬಿಜೆಪಿ ಕಾರ್ಯಕರ್ತರು ಕಳೆದ ಗೌರಿಹಬ್ಬದ ದಿನ ರಮ್ಯಾ ಅವರಿಗೆ ಹಬ್ಬದ ಬಾಗಿನ ಕಳುಹಿಸಿದ್ದರು. ರಮ್ಯಾ ಕಳೆದ ವಿಧಾನಸಭೆ, ನಗರಸಭೆ ಚುನಾವಣೆ ವೇಳೆ ಮತ ಚಲಾವಣೆ ಮಾಡಿಲ್ಲ. ಈಗಲಾದರೂ ಅವರು ಬಂದು ಹಕ್ಕು ಚಲಾಯಿಸುತ್ತಾರೆಯೇ ಎಂಬ ಪ್ರಶ್ನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !